‘ಕನಕದಾಸ ರಾಮಧಾನ್ಯ ಪ್ರಸಂಗ ಓದು’ ಕೃತಿಯು ಸಿ.ಪಿ ನಾಗರಾಜ ಅವರ ನಾಟಕ ರೂಪ ಕೃತಿಯಾಗಿದೆ. ಈ ಹೊತ್ತಿಗೆಯು ಮೂರು ಭಾಗಗಳಲ್ಲಿ ರಚನೆಗೊಂಡಿದೆ. ಮೊದಲನೇಯ ಭಾಗವಾಗಿ ನಾಟಕ ರೂಪ, ಎರಡನೇಯ ಭಾಗವಾಗಿ ಪದ ವಿಂಗಡಣೆ ಮತ್ತು ತಿರುಳು ಹಾಗೂ ಮೂರನೇಯ ಭಾಗವಾಗಿ ಕನಕದಾಸರ ‘ರಾಮಧಾನ್ಯ ಚರಿತ್ರೆ’ ಕಾವ್ಯದಿಂದ ಆಯ್ಕೆ ಮಾಡಿಕೊಂಡಿರುವ ಪದ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಕನಕದಾಸರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ 158 ಪದ್ಯಗಳಿಂದ ಕೂಡಿದ ‘ರಾಮಧಾನ್ಯ ಚರಿತ್ರೆ’ ಯಲ್ಲಿ ಪ್ರಮುಖ ಪಾತ್ರಗಳಾದ ‘ರಾಗಿ’ ಮತ್ತು ‘ಬತ್ತ’ ಧಾನ್ಯಗಳ ನಡುವೆ ಮಾತುಗಳನ್ನು ನಾಟಕ ರೂಪಕ್ಕೆ ಜೋಡಿಸಿ, ಪದ ವಿಂಗಡಣೆ ಆಗಿರುವ ವಿಚಾರಗಳನ್ನು ಇಲ್ಲಿ ಕಾಣಬಹುದು.
ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...
READ MORE