ಹಿರಿಯ ಲೇಖಕ ಹಾಗೂ ಚಿಂತಕ ಪು.ತಿ. ನರಸಿಂಹಚಾರ್ ಅವರು ಬರೆದ ರಾಜಕೀಯ ವಸ್ತು ಹೊಂದಿದ ನಾಟಕ-ವಿಕಟಕವಿ ವಿಜಯ. ಈ ಕೃತಿಗೆ ಹಿರಿಯ ಸಾಹಿತಿ ಡಿ.ವಿ.ಜಿ ಅವರು ಮುನ್ನುಡಿ ಬರೆದು ‘1942 ರಿಂದ 1947ರವರೆಗಿನ ರಾಜಕೀಯ ಕೋಲಾಹಲವೇ ಇಲ್ಲಿಯ ನಾಟಕದ ವಸ್ತು. ದೇಶದಲ್ಲಿದ್ದ ಸಂಸ್ಥಾನಿಕ ಅರಸರು ಬ್ರಿಟಿಷ್ ಆಡಳಿತದೆಡೆಗಿನ ಪ್ರತಿಕ್ರಿಯೆ ಹೇಗೆ? ವಿಕಟ ಕವಿ ವಿಜಯನಂತವರ ಮಂತ್ರಿಗಳ ಸಲಹೆ ಏನು? ಹೀಗೆ ರಾಜಕೀಯ ವಸ್ತುವಿನಿಂದ ಸಾಹಿತ್ಯದ ರಸಪಾಕ ಹೊರಡಿಸುವ ಸಿದ್ಧಿಯನ್ನು ಪು.ತಿ. ನರಸಿಂಹಾಚಾರ್ ಅವರಿಗೆ ಸಿದ್ಧಿಸಿದೆ. ಆದರೆ, ಜನರಿಗೆ ಇಂತಹ ಸಾಹಿತ್ಯ ಎಷ್ಟು ಹಿಡಿಸುತ್ತದೆ? ದಿನೇದಿನೇ ವಾಸ್ತವಿಕ ಪ್ರಪಂಚದ ಮೇಲೆ ಕಟ್ಟಿದ ಕಾಲ್ಪನಿಕ ಸ್ವರ್ಗದ ಗತಿ ಇಷ್ಟೆ. ರಾಜಕೀಯ ಒರಟು ವ್ಯಾಪಾರ, ಕಾವ್ಯದ್ದು ನವಿರು ಸಂಸ್ಕಾರ, ರಾಜಕೀಯ ನಾಯಿಯ ಬಾಲ. ಕಾವ್ಯ ಆನೆಯ ಸೊಂಡಿಲು’ ಎನ್ನುವ ಮೂಲಕ ರಾಜಕೀಯ ವಸ್ತುವಿನ ಈ ನಾಟಕದಲ್ಲಿ ಇರುವ ಸಾಹಿತ್ಯಕ ಗುಣವನ್ನು ಪ್ರಶಂಸಿಸಿದ್ದಾರೆ.
©2024 Book Brahma Private Limited.