'ಹಾಗೆ-ಹೀಗೆ' ಆರ್.ಎಸ್.ಗಿರಿ ಅವರ ಕೃತಿಯಾಗಿದೆ. ಕೃತಿಯ ತಲೆಬರಹವನ್ನು ನೋಡಿದಾಗ "ಇದು ಎಂತಾ ಕಥೆಯಪ್ಪ?" ಎಂಬ ಅನುಮಾನ ಓದುಗನಿಗೆ ಉಂಟಾಗುವುದು ಸಹಜ. ಆದರೆ ಅವರು ಇಲ್ಲಿ ತಾವು ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಒಂದೊಂದಾಗಿ ಆರಿಸಿ ಪೊಣಿಸುತ್ತಾ ಹೋಗುತ್ತಾರೆ. ಒಂದೊಂದು ಘಟನೆಯು ಒಂದೊಂದು ಕಥೆಯಂತೆ ಕಾಣಿಸುತ್ತದೆ. ಈ ರೀತಿಯಲ್ಲಿ ನಮಗೆ ಆಸಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ನನಗಂತೂ ಆ ಘಟನೆಗಳನ್ನು ಓದುತ್ತಿದ್ದರೆ ಒಂದೊಂದು ಘಟನೆಗಳನ್ನು ಒಂದೊಂದು ಕಥೆಯನ್ನಾಗಿ ಮಾಡಬಹುದು ಎಂಬ ಅನಿಸಿಕೆ ಯಾಗುತ್ತಿದೆ. ಮುಂದಿನ ನನ್ನ ಯಾವುದಾದರೂ ಕಥೆಗಳಿಗೆ ಇಲ್ಲಿ ಬರುವ ಕೆಲವೊಂದು ಘಟನೆಗಳು ಸ್ಪೂರ್ತಿ ಆದರೂ ಆಗಬಹುದು.
ಆರ್.ಎಸ್.ಗಿರಿ ಅವರು ಮೈಸೂರಿನಲ್ಲಿ ಸುಮಾರು 50 ವರ್ಷಗಳ ಕಾಲ ನೆಲೆಸಿದರು. ತಮ್ಮ ನಿವೃತ್ತಿಯ ನಂತರ ಸಾಗರದ ಗೆಣಸಿನಕುಣಿಯಲ್ಲಿ ನೆಲೆಸಿದ್ದಾರೆ. ಅವರು ವ್ಯವಸಾಯವನ್ನು ಮಾಡುತಿದ್ದಾರೆ. ಕೃತಿಗಳು : ಹಾಗೆ ಹೀಗೆ ...
READ MORE