ಎರಡು ನಾಟಕಗಳು

Author : ಶ್ರೀನಿವಾಸ ವಿ. ಸುತ್ರಾವೆ



Published by: ವಿನಯ್‌ ಪ್ರಕಾಶನ
Address: ವಿದ್ಯಾನಗರ, ದಾವಣಗೆರೆ

Synopsys

‘ಎರಡು ನಾಟಕಗಳು’ ಶ್ರೀನಿವಾಸ ಸುತ್ರಾವೆ ಅವರ ಕಥಾಸಂಕಲನವಾಗಿದೆ. ದುಡಿಯುವ ಎಲ್ಲ ಮಕ್ಕಳನ್ನೂ ಪತಿಯನ್ನೂ ಕಳೆದುಕೊಂಡ ಅನಾಥ ಮಹಿಳೆಯೊಬ್ಬಳ ದಾರುಣ ಚಿತ್ರಣ ಕಡಲ ತಡಿಯ ಬದುಕನ್ನು ತೆರೆದಿಡುತ್ತದೆ. ಇನ್ನೊಂದು ನಾಟಕದಲ್ಲಿ ಸಮಾನ ಮನಸ್ಥ ವ್ಯಕ್ತಿಗಳ ನಡುವೆ ಮಿಡಿಯುವ ಅತ್ಯಂತ ನಾಜೂಕಾದ ಭಾವನೆಯನ್ನು ಪತ್ತೆ ಮಾಡಿದ್ದು ಪ್ರೀತಿಯಿಲ್ಲದ ಬರಡು ಬಾಳನ್ನು ಬೆಲೆ ರಹಿತ ವಸ್ತುವನ್ನಾಗಿಸಿದೆ.

About the Author

ಶ್ರೀನಿವಾಸ ವಿ. ಸುತ್ರಾವೆ
(30 March 1942)

ಶ್ರೀನಿವಾಸ ವಿ. ಸುತ್ರಾವೆ ಮೂಲತಃ ದಾವಣಗೆರೆಯವರು, ತಂದೆ ಎಸ್. ವೆಂಕಟಗಿರಿ ರಾವ್, ತಾಯಿ- ಎಸ್. ಶಾಂತಾಬಾಯಿ. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಡಿ.ಆರ್.ಎಂ ಕಾಲೇಜಿನಲ್ಲಿ ಪಿಯೂಸಿ ಪೂರ್ಣಗೊಳಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ  ಪೂರ್ಣಗೊಳಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ಅವರು  ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಉದುರುವ ಎಲೆಗಳು, ಚೆರಿ ತೋಟ, ಆಯ್ದ ರಷ್ಯನ್ ಕಥೆಗಳು, ಚೆಕಾಫನ ಎರಡು ನಾಟಕಗಳು, ಸಿಂಹ ಮತ್ತು ರತ್ನ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Reviews

ಹೊಸತು -2003- ಫೆಬ್ರವರಿ

ಇದು ಎರಡು ಐರಿಶ್ ನಾಟಕಗಳ ಅನುವಾದ. ಮೊದಲ ನಾಟಕದಲ್ಲಿ ಬದುಕನ್ನು ನೀಡುವ ಕಡಲು ಮುನಿದಾಗ ಅನಿರೀಕ್ಷಿತ ಸಾವನ್ನು ಅಷ್ಟೇ ಸಹಜವಾಗಿ ನೀಡುವ ಕಥಾವಸ್ತು ಇದೆ. ದುಡಿಯುವ ಎಲ್ಲ ಮಕ್ಕಳನ್ನೂ ಪತಿಯನ್ನೂ ಕಳೆದುಕೊಂಡ ಅನಾಥ ಮಹಿಳೆಯೊಬ್ಬಳ ದಾರುಣ ಚಿತ್ರಣ ಕಡಲ ತಡಿಯ ಬದುಕನ್ನು ತೆರೆದಿಡುತ್ತದೆ. ಇನ್ನೊಂದು ನಾಟಕದಲ್ಲಿ ಸಮಾನ ಮನಸ್ಕ ವ್ಯಕ್ತಿಗಳ ನಡುವೆ ಮಿಡಿಯುವ ಅತ್ಯಂತ ನಾಜೂಕಾದ ಭಾವನೆಯನ್ನು ಪತ್ತೆ ಮಾಡಿದ್ದು ಪ್ರೀತಿಯಿಲ್ಲದ ಬರಡು ಬಾಳನ್ನು ಬೆಲೆರಹಿತ ವಸ್ತುವನ್ನಾಗಿಸಿದೆ.

Related Books