ದರಿದ್ರ ನಾರಾಯಣ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 113

₹ 0.00




Year of Publication: 1933
Published by: ಜಯಕರ್ನಾಟಕ ಗ್ರಂಥಮಾಲೆ
Address: ಧಾರವಾಡ

Synopsys

ಉಚ್ಛ ಶಿಕ್ಷಣ ಪಡೆದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಛಲದೊಂದಿಗೆ ದೊಡ್ಡ ತತ್ವವನ್ನು ಯಲೆಯಲ್ಲಿ ತುಂಬಿಕೊಂಡ ಇಬ್ಬರು ತರುಣರು, ತಮ್ಮ ಈ ಯೋಜನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ತಿಳಿಯದೇ ತೊಳಲಾಡುವ ಇಬ್ಬರು ತರುಣರ ಕಥೆಯೇ ದರಿದ್ರ ನಾರಾಯಣ-ಸಾಮಾಜಿಕ ನಾಟಕದ ಕಥಾ ವಸ್ತು. ಆದರೆ, ಆಡದೇ ಮಾಡಿ ತೋರಿಸುವವನೂ ಒಬ್ಬ ಪಾತ್ರಧಾರಿ ಇದ್ದು, ಪರಿಸ್ಥಿತಿಯಿಂದ ಕಂಗೆಡುವ ಪಾತ್ರಗಳು, ತಮ್ಮದೇ ನಡೆಯಬೇಕು ಎಂದು ಹಠ ಸಾಧಿಸುವ ಹಿರಿಯರು-ಪೋಷಕ ಪಾತ್ರಗಳಲ್ಲಿದ್ದು, ವ್ಯವಹಾರೋದ್ಯಮಗಳು ಕ್ರಮೇಣ ಸ್ಥಗಿತಗೊಳ್ಳುತ್ತಿದ್ದು. ಮುಂದೇನು ಎಂಬ ಚಿಂತೆಯು ಸಾರ್ವಜನಿಕರ ಚಿಂತನೆಯನ್ನು ಪ್ರೇರೇಪಿಸುತ್ತದೆ. ನಮ್ಮ ದೇಶದಲ್ಲಿ ವ್ಯವಹಾರೋದ್ಯಮ ಬೆಳೆಸಲು ವಿಫುಲ ಕಚ್ಚಾವಸ್ತುಗಳು ಇದ್ದರೂ ಆ ಕಡೆ ಗಮನ ಹರಿಸುತ್ತಿಲ್ಲ. ಇದನ್ನು ಸಹ ನಾಟಕದ ಮೂಲಕ ಹೇಳಲಾಗಿದೆ. ಈ ಬಗ್ಗೆ ತಿಳಿಯುವುದು ಅಗತ್ಯ ಎಂದು ನಾಟಕಕ್ಕೆ ಮುನ್ನುಡಿ ಬರೆದ ಧೀರೇಂದ್ರ ಕೃಷ್ಣ ಗುಂಜೀಕರ್ ಅವರು  ಅಭಿಪ್ರಾಯಪಟ್ಟಿದ್ದಾರೆ.

 

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books