ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ-ಬಂಡ್ವಾಳಿಲ್ಲದ ಬಡಾಯಿ.ಅಹೋಬ್ಲು, ಪತ್ನಿ ಜೀವು, ಪುತ್ರ ಮುದ್ದಣಿ, ಕೋರ್ಟ್‌ನ ಗುಮಾಸ್ತ, ಬೋರ -ಜವಾನ, ಇಬ್ಬರು ಕಕ್ಷಿದಾರರು, ಇಬ್ಬರು ಸ್ನೇಹಿತರು-ಇಷ್ಟು ಪಾತ್ರಗಳು ನಾಟಕದ ಕಥಾ ವಸ್ತುವನ್ನು ಸಾರ್ಥಕಗೊಳಿಸಿವೆ. ಕೈಲಾಸಂ ಅವರ ನಾಟಕದ ವೈಶಿಷ್ಟಯ-ಪಕ್ಕಾ ಆಡು ಭಾಷೆ. ಅದೂ ಪ್ರಾದೇಶಿಕವಾಗಿಯೂ ಇದ್ದು, ಜೋರು ಜೋರಾಗಿ ಓದಿಕೊಂಡರೆ ಮಾತ್ರ ಅರ್ಥಕ್ಕೆ ನಿಲುಕುತ್ತದೆ. ನಾಟಕದಲ್ಲಿ ಪಾತ್ರಗಳ ಮಾತುಗಳು ಆಡು ಮಾತಿನ ಸೊಗಡು ಇದ್ದರಿಂದ ತಿಳಿಯಲು ಕಷ್ಟವಾಗದು. ಒಟ್ಟು ಪರಿಣಾಮದಲ್ಲಿ ನಾಟಕವು ಅರ್ಥಪೂರ್ಣ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE