ಮಾತೋಶ್ರೀ ಮಾದಕ

Author : ಚಂದ್ರಶೇಖರ ಕಂಬಾರ

₹ 120.00




Year of Publication: 2022
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100

Synopsys

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕೃತಿ ಮಾತೋಶ್ರೀ ಮಾದಕ. ಪ್ರಭಾ ಕಂಬತ್ತಳ್ಳಿ ಅವರ ಬೆನ್ನುಡಿಯ ಮಾತುಗಳಲ್ಲಿ ‘ಮಾತೋಶ್ರೀ ಮಾದಕ’ ಕಂಬಾರರ ಇತ್ತೀಚಿನ ವಿಶಿಷ್ಟ ಬಗೆಯ ಪ್ರಸನ. ಆಧುನಿಕತೆ ಹಾಗೂ ಪಾರಂಪರಿಕ ದೇಶೀ ಜ್ಞಾನದ ಸಂಘರ್ಷವನ್ನು ಹೇಳುವಂಥದ್ದು. ಆಧುನಿಕ ಬದುಕು ದೇಶೀಜ್ಞಾನದ ಸದ್ಬಳಕೆಯ ಹದವಾದ ಮಿಶ್ರಣ ಎಷ್ಟೆಲ್ಲಾ ಸಂಕಷ್ಟವನ್ನು ದೂರ ಮಾಡಬಲ್ಲದೆಂಬುದನ್ನು ವಿನೋದಮಯ, ಪ್ರೇಮಕಥೆಯ ಮುಖಾಂತರ ಕಂಬಾರರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ದೇಶೀ ಜ್ಞಾನದ ನಿಧಿಯಾದ ಮುಗ್ಧ ರಾಚೋಟಿ ಪಾತ್ರ ಒಂದೆಡೆಯಾದರೆ, ಅವನನ್ನು ತನ್ನ ರಾಜಕೀಯ ಲಾಭಕ್ಕೆ ಬಳಸುವ ಮಂದಿ ಇನ್ನೊಂದೆಡೆ. ಈ ಪಾರಂಪರಿಕ ಸಂಪತ್ತನ್ನು ಸೂಕ್ತ ಕೈಗಳಲ್ಲಿರಿಸಿ ಸಂರಕ್ಷಿಸುವ ಅಗತ್ಯವಿದೆ ಎಂಬ ಆಶಯವನ್ನು ನಾಟಕ ಸಾಂಕೇತಿಕವಾಗಿ ಹೇಳುತ್ತದೆ ಎಂಬುದಾಗಿ ಹೇಳಿದ್ದಾರೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books