ಲೀಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ನಾಟಕಗಳ ಸಂಕಲನ-ಗೆಲ್ಗೆ, ತ್ಯಾಗ, ನಾನೂ ಕವಿಯಾಗ್ತೀನಿ. 1997ರ ಫೆಬ್ರವರಿಯಲ್ಲಿ ಧಾರವಾಡದ ಜಿಲ್ಲಾ ತರಬೇತಿ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ 10 ದಿನಗಳ ಕಾಲ ಪಠ್ಯಾಧರಿತ ನಾಟಕಗಳು ಕುರಿತಂತೆ ನಡೆದ ತರಬೇತಿಯೇ ಕೃತಿ ರಚನೆಗೆ ಕಾರಣ. ಕನ್ನಡ ಅಳಿವು-ಉಳಿವು ಕುರಿತ ಸಂದೇಶದ ನಾಟಕ ‘ಗೆಲ್ಗೆ’ ಹಾಗೂ 3ನೇ ತರಗತಿಯ ಪಠ್ಯ ಪುಸ್ತಕ ಕನ್ನಡ ಭಾರತಿಯಲ್ಲಿದ್ದ ಪ್ರತಿಫಲ ಕಥೆಯನ್ನಾಧರಿಸಿ ‘ತ್ಯಾಗ’ ಎಂಬ ನಾಟಕ ಹಾಗೂ ಬರೆಹದ ಗಂಭೀರತೆ ತಿಳಿಯದವರೂ ಬರೆಹಗಾರರಾಗುತ್ತಿದ್ದಾರೆ. ಇದರಿಂದ ಸಾಹಿತ್ಯದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಸಂದೇಶ ರವಾನೆಗೆ ವ್ಯಂಗ್ಯವಾಗಿ ‘ನಾನೂ ಕವಿಯಾಗ್ತೀನಿ’ ಎಂಬ ನಾಟಕ ಬರೆಯಲಾಗಿದೆ. ಈ ಮೂರೂ ನಾಟಕಗಳನ್ನು ಸೇರಿಸಿದ ಸಂಕಲವಿದು ಎಂದು ಲೇಖಕರು ಹೇಳಿದ್ದಾರೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE