ಕಿರಗೂರಿನ ಗಯ್ಯಾಳಿಗಳು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ. ಈ ಕಾದಂಬರಿಯನ್ನು ಲೇಖಕ ಅ. ನಾ. ರಾವ್ ಜಾದವ್ ನಾಟಕವಾಗಿ ರೂಪಾಂತರಿಸಿ ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಗ್ರಾಮ ಸೇವಕ ಶಂಕರಪ್ಪನಿಂದ ಹಿಡಿದು ಮಾರ, ಸಿದ್ಧ, ದಾನಮ್ಮ, ಸುಬ್ಬಯ್ಯ, ಸೀಗೇಗೌಡ, ಭೈರಪ್ಪ, ಕಾಳೇಗೌಡ - ಇತ್ಯಾದಿ, ತಮ್ಮದೇ ತಾಪತ್ರಯಗಳಲ್ಲಿ ಸಿಕ್ಕಿ ಒದ್ದಾಡುವ ಕಿರಗೂರಿನ ಜನರ ಜೊತೆಗೆ, ಹಗರಣಕ್ಕೆ ಕಾರಣವಾಗುವ ಹೆಬ್ಬಲಸಿನ ಮರವನ್ನೂ ರಂಗದ ಬೆಳಕಿಗೊಡ್ಡಿದ್ದಾರೆ.
ನಟನೆ, ನಾಟಕ ರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ... ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು-ಅ ನಾ ರಾವ್ ಜಾದವ್. ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಿರ್ದೆಶಿಸಿದ್ದಾರೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ-ಪರಂಪರೆ’ ಕುರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ...
READ MORE