'ದಿಶಾಂತರ' ಡಿ. ಎಸ್. ಚೌಗಲೆ ಅವರ ಮೊದಲ ನಾಟಕ. ತಂಬಾಕು ಬೆಳೆಗಾರರ, ಬೀಡಿ ಕಾರ್ಮಿಕರ ಸ್ಥಿತಿಗತಿ, ಕಾರ್ಖಾನೆಗಳಲ್ಲಿಯ ಕಾರ್ಮಿಕರ ವಾಸ್ತವ, ಮಹಿಳಾ ಕಾರ್ಮಿಕರ ಶೋಷಣೆ ಚಿತ್ರಣವನ್ನು ಅಚ್ಚುಕಟ್ಟಾಗಿ ರಂಗ ಪ್ರಯೋಗಕ್ಕೊಳ ಪಡಿಸಿದ ನಾಟಕ ಇದು. ಇದಕ್ಕೆ ಪ್ರತಿರೋಧವೊಡ್ಡಿ ಚಳವಳಿ ಸ್ವರೂಪ ಪಡೆದ ಕುರಿತು ನಾಟಕಕಾರರು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ಈ ನಾಟಕಕ್ಕೆ ರಂಗ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...
READ MORE