ಮಾಯಾದಂಡ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 124

₹ 150.00




Year of Publication: 2022
Published by: ಅನಿಮಿಷ ಪ್ರಕಾಶನ
Address: ದಾವಣಗೆರೆ ಜಿಲ್ಲೆ 7ನೆಯ ತಿರುವು, ದುರ್ಗಿಗುಡಿ ಹೊನ್ನಾಳಿ- 577217
Phone: 9164526045

Synopsys

ಮಾಯಾದಂಡ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕೃತಿಯಾಗಿದೆ. ಈ ನಾಟಕದಲ್ಲಿ ಶೇಕ್ಸ್‌ಪಿಯರ್‌ನ ಪ್ರತಿಭೆ ಹಾಗೂ ಭವಿಷ್ಯದಲ್ಲಿ ಅವನು ಇಡೀ ಜಗತ್ತಿನಲ್ಲಿ ಪಡೆಯುವ ಕೀರ್ತಿಯ ಬಗ್ಗೆ ಅನೇಕ ಭವಿಷ್ಯವಾಣಿಗಳಿವೆ. ಆ ಭವಿಷ್ಯವಾಣಿಗಳ ಸತ್ಯದ ಇನ್ನೊಂದು ಸಾಕ್ಷಿಯಾಗಿ ಈ ಕನ್ನಡ ನಾಟಕವನ್ನು ಓದಬಹುದಾಗಿದೆ. ಶೇಕ್ಸ್‌ಪಿಯರ್ ವಿಶ್ವದ ಅತಿ ಭಿನ್ನವಾದ ಅನೇಕ ಸಾಮಾಜಿಕ ಲೋಕಗಳಲ್ಲಿ ಹಾಗೂ ರಾಜಕೀಯ ಸಂದರ್ಭಗಳಲ್ಲಿ ಮರುಹುಟ್ಟು ಪಡೆಯುತ್ತಲೇ ಇದ್ದಾನೆ. ಪ್ರಶಂಸೆಗಿಂತ ಮರು ವ್ಯಾಖ್ಯಾನಗಳು, ಮರು ಬರಹಗಳು, ನಿರ್ಭಿಡೆಯಾಗಿ ಅವನ ನಾಟಕದ ಕತೆಗಳನ್ನು ಮತ್ತು ಪಾತ್ರಗಳನ್ನು ಹೊಸದಾದ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ಇವುಗಳ ಮುಖಾಂತರ ಅವನ ನಿರಂತರವಾದ ಮರುಹುಟ್ಟು ಸಾಧ್ಯವಾಗಿದೆ ಎಂದು ರಾಜೇಂದ್ರ ಚೆನ್ನಿ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books