ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧೋದಯ ಮತ್ತು ಇತರ ಎರಡು ನಾಟಕಗಳು. ಬುದ್ಧ ಚಿಂತನೆಯನ್ನು ಒಳಗೊಂಡ ಈ ನಾಟಕಗಳು ವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಸಂಭಾಷಣೆ ದೃಷ್ಟಿಯಿಂದ ಪ್ರೇಕ್ಷಕರ ಹಾಗೂ ಓದುಗರ ಗಮನ ಸೆಳೆಯುತ್ತವೆ. ಇಪ್ಪತ್ತೈದು ಬಿಡಿ ಸಂಪುಟಗಳನ್ನು ಒಳಗೊಂಡಿರುವ ಸಮಗ್ರ ಬುದ್ಧ ಸಾಹಿತ್ಯ ಮಾಲೆಯ 23ನೇ ಬಿಡಿ ಸಂಪುಟ ಈ ಕೃತಿಯಾಗಿದೆ. ಈ ಕೃತಿಯು "ಅಮೃತತ್ವದೆಡೆಗೆ ಸಿದ್ದಾರ್ಥ ಗೌತಮ", “ಬುದ್ದೋದಯ” ಮತ್ತು " ಬುದ್ಧನ ಪ್ರಥಮ ಬೋಧನೆ” ಎಂಬ ಒಟ್ಟು ಮೂರು ನಾಟಕಗಳನ್ನು ಒಳಗೊಂಡಿದೆ. ಮೊದಲನೇಯ ನಾಟಕವಾದ "ಅಮೃತತ್ವದೆಡೆಗೆ ಸಿದ್ದಾರ್ಥ ಗೌತಮ" ಕೃತಿಯು ಗೌತಮ ಬುದ್ಧರ ಜೀವನ ಚರಿತ್ರೆಯ ಮೊದಲನೇ ಭಾಗವಾದರೆ, ಎರಡನೇಯ ನಾಟಕ “ಬುದ್ದೋದಯ”ವು ಸಿದ್ದಾರ್ಥ ಗೌತಮರು ಕಪಿಲವಸ್ತುವನ್ನು ತೊರೆದು ಜ್ಞಾನೋದಯ ಎಂದರೆ ಏನು? ಅದರ ಅರ್ಥ ಏನು? ಅದು ಏತಕ್ಕಾಗಿ? ಯಾರಿಗಾಗಿ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುತ್ತದೆ. ಮೂರನೆಯ ನಾಟಕ, ಜ್ಞಾನೋದಯಗೊಂಡ ಬುದ್ಧರು ಬಗ್ಗೆ ಹೊಸ ನೋಟವೇ ನಮ್ಮ ಕಣ್ಣೆದುರು ತೆರೆದು ನಿಲ್ಲುತ್ತದೆ. ಹಾಗೆಯೇ ಅವರ ಬಗ್ಗೆ ವ್ಯವಸ್ಥಿತ ಒಳಸಂಚು, ಆರೋಪ, ಕುತಂತ್ರ ಮುಂತಾದವುಗಳು ತಾನೇ ತಾನಾಗಿ ಕಳಚಿಕೊಳ್ಳುತ್ತವೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE