‘ಒಂದು ನಾಟಕದ ಕೊನೆಯ ಅಂಕ’ ಕೃತಿಯು ವಿಷ್ಭು ಭಟ್ ಹೊಸ್ಮನೆ ಅವರ ನಾಟಕಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಗೋಪಾಲಕೃಷ್ಣ ಕುಂಟಿನಿ ಅವರು, ‘ಗೆಳೆಯ ವಿಷ್ಣು ಭಟ್ ಅವರು ಹೊಸ ಕತೆಗಳ ಸಂಕಲನವನ್ನು ಹೊರತಂದಿದ್ದಾರೆ. ಹೊಸ ಕಥೆಗಳು ಎಂದು ಏಕೆ ಹೇಳಿದೆ ಎಂದರೆ ಈ ಸಂಕಲನದ ಪ್ರತಿಯೊಂದು ಕಥೆಗಳೂ ವಸ್ತು ಮತ್ತು ವಿನ್ಯಾಸದಲ್ಲಿ ಹೊಸತಾಗಿವೆ. ಮೇಲ್ನೋಟಕ್ಕೆ ದೆವ್ವದ ಕಥೆಗಳ ರೀತಿ ಕಾಣುತ್ತವೆ ಎಂದು ಮೊದಲ ಓದಿಗೆ ಅನ್ನಿಸುತ್ತದೆ ಮತ್ತು ಹಾಗೇ ಅನಿಸಿಕೊಂಡ ಮೇಲಷ್ಟೇ ಈ ಕಥೆಗಳ ಒಳಗನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಅಲ್ಲೋ ಇಲ್ಲೋ ಎಂದೋ ಎಲ್ಲೋ ಕೇಳಿದ ಕಥೆಗಳಂತೆ ಭಾಸವಾಗುವ ವಿಷ್ಣು ಭಟ್ಟರ ಈ ಕಥೆಗಳ ವಿಶೇಷತೆ ಏನೆಂದರೆ, ಇವುಗಳಲ್ಲಿ ಅಡಗಿದ ಒಂದು ನಿಗೂಢತೆ. ಇವುಗಳೆಲ್ಲಾ ವಾಸ್ತವವೋ ಮಾಯಾ ವಾಸ್ತವವೋ ಮೂಢವೋ ಗೂಢವೋ ಎಂಬುದನ್ನು ಒಂದೊಂದು ಕಥೆಯ ಒಂದೊಂದು ಪಾತ್ರಕ್ಕೂ ಓದುಗ ಮುಖವಿಟ್ಟು ಕುಳಿತಾಗಲೇ ಅರಿವಾಗುತ್ತದೆ. ಹಾಗೇ ನೋಡಿದರೆ, ಈ ಪಾತ್ರಗಳು ಎಲ್ಲೋ ಹೊರಗಿನವುಗಳೇ ಅಲ್ಲ. ಇಲ್ಲೇ ನಮ್ಮಲ್ಲೇ ನಮ್ಮ ಜೊತೆಯಲ್ಲೇ ಕೊನೆಕೊನೆಗೆ ನಮ್ಮದೇ ಆಗಿ ಅಂತಿಮವಾಗಿ ನಾವೇ ಎಂದೆನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.