ಸಾಮಾಜಿಕ ಕಾರ್ಯಕರ್ತೆ, ಲೈಂಗಿಕ ಅಲ್ಪಸಂಖ್ಯಾತೆ ಅಕ್ಕಯ್ ಪದ್ಮಶಾಲಿ ಅವರ ಆತ್ಮಕತೆಯನ್ನು ಆಧರಿಸಿದ ಏಕವ್ಯಕ್ತಿ ನಾಟಕ ಕೃತಿ ಬೇಲೂರು ರಘುನಂದನ್ ರಚನೆಯ ‘ಅಕ್ಕಯ್’. ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಬದುಕಿನ ಸಂಕಷ್ಟಗಳು, ಲೈಂಗಿಕ ಅತ್ಯಾಚಾರ ದೌರ್ಜನ್ಯಗಳು ಹಾಗೂ ಸಮಾಜವು ಅವರನ್ನು ಕಾಣುವ ಬಗೆಯ ಅರಿವನ್ನು ನಾವು ಇಲ್ಲಿ ಕಾಣಬಹುದು. ಸಾರ್ವಜನಿಕ ಬದುಕಿನ ಸಾಮಾಜಿಕ ಕಾರ್ಯಕರ್ತಳಾಗಿ, ಪ್ರೀತಿಸುವ ಪ್ರೇಮಿ, ಲಗ್ನ, ದತ್ತು ಪುತ್ರ- ಹೀಗೆ ಬದುಕಿನ ಬಂಡಿಯ ಚಕ್ರವು ಉಳಿಯುತ್ತಿರುವಾಗಲೇ ಆಕೆಯಲ್ಲಿನ ತಾಯ್ತನ, ಬಂಧುತ್ವ ಟಿಸಿಲೊಡೆಯುವ ಪರಿಯು ಭಿನ್ನವಾಗಿದೆ. ಅಕ್ಕಯ್ ಬಾಲಕನಿದ್ದಾಗ ಹೆಣ್ತನದ ತುಡಿತ ಮತ್ತದನ್ನು ಪ್ರತಿರೋಧಿಸುವ ಕುಟುಂಬ ಮತ್ತು ಸಮಾಜ-ಹೀಗೆ ನಾಟಕ ತನ್ನೊಳಗಿನ ಪಠ್ಯದ ಸುಳಿವನ್ನು ತೆರೆದು ನೀಡುತ್ತ ಸಾಗುತ್ತದೆ. ಅಕ್ಕಯ್ ಅವರ ಬದುಕಿನ ವೈಶಿಷ್ಟವನ್ನು ಈ ಕೃತಿಯೂ ತೆರೆದಿಡುತ್ತಾ, ಸಕಾರಾತ್ಮಕ ಬದುಕಿನ ನಿಲುವು ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
©2024 Book Brahma Private Limited.