ಪೀಠಿಕಾ ದೃಶ್ಯ ಹಾಗೂ ಉಪಸಂಹಾರ ದೃಶ್ಯ ಹಾಗೂ ಇವುಗಳೊಂದಿಗೆ ಹತ್ತು ದೃಶ್ಯಗಳನ್ನು ಒಳಗೊಂಡಂತಹ ನಾಟಕ ಮಹಾರಾತ್ರಿ. ಈ ನಾಟಕದಲ್ಲಿ ಕುವೆಂಪು ಅವರು ಸಿದ್ದಾರ್ಥನು ಬುದ್ಧನಾಗಲು ಹೊರಟಂತಹ ರಾತ್ರಿಯ ಕಥಾನಕವನ್ನು ವರ್ಣಿಸಲಾಗಿದೆ. ಮಹಾರಾತ್ರಿ ನಾಟಕದಲ್ಲಿ ಸತ್ಯ ಮತ್ತು ಮಿಥ್ಯಗಳ ನಡುವಿನ ಸಂಬಂಧ, ದುಃಖ ದುಮ್ಮಾನಗಳನ್ನು ಮೆಟ್ಟಿ ನಿಲ್ಲುವ ಪ್ರಸಂಗವನ್ನು ವಿವರಿಸಲಾಗಿದೆ. ಸಿದ್ದಾರ್ಥ ಬುದ್ದನಾಗಲು ಹೊರಟನೆಂಬ ಸುದ್ದಿಯನ್ನು ಜಗದ ಉದ್ದಗಲಕ್ಕೂ ಸಾರಲು ಹೊರಟ ಕಿನ್ನರಿಗಳಿಂದ ಆರಂಭವಾಗುವ ಈ ನಾಟಕ ಸಿದ್ದಾರ್ಥನಿಗೆ ಹುಟ್ಟಿರುವ ಗಂಡು ಮಗುವಿನ ಶುಭ ಸಮಾಚಾರದೊಂದಿಗೆ ಮುಂದುವರೆಯುತ್ತದೆ. ಆದರೆ ಆ ಶುಭ ವಾರ್ತೆಯನ್ನು ಕೇಳಿಸಿಯೂ ಕೂಡ, ಜಗದ ನೋವುಗಳನ್ನು ನೆನೆಸಿ ದುಃಖತಪ್ತನಾಗುವ ಸಿದ್ದಾರ್ಥನ ಕಥೆ ಮುಂದುವರೆಯುತ್ತದೆ. ತಾನು ಎಲ್ಲವನ್ನೂ ತೊರೆದು ತನ್ನಲ್ಲಿರುವ ಆಭರಣಗಳನ್ನುತನ್ನ ದಾಸನಿಗೆ ನೀಡಿ ಅಹೋರಾತ್ರಿ ತನ್ನ ಅರಮನೆಯನ್ನು ಬಿಟ್ಟು ತೆರಳುವ ಬುದ್ದನ ಮನಸ್ಸಿನ ದ್ವಂದ್ವಗಳ ಪರಿಚಯವನ್ನು ಮಾಡಿಸುತ್ತದೆ ಈ ನಾಟಕ. ಸಾಂಸಾರಿಕ ಕಷ್ಟ ನಷ್ಟಗಳ, ನೋವು ಸಾವುಗಳ, ಸುಖ ದುಃಖಗಳ ಪರಿದಿಯನ್ನು ಧಾಟಿ ಶಾಶ್ವತ ಜ್ಞಾನವನ್ನು ಅರಸಿ ಹೊರಟಂತಹ ಬುದ್ಧನ ಆರಂಭವೇ ಮಾಹಾರಾತ್ರಿ ನಾಟಕ.
©2024 Book Brahma Private Limited.