ನಗರವಧು ಸಾಲವತಿ

Author : ವಿಜಯಾ ಸುಬ್ಬರಾಜ್

Pages 92

₹ 70.00




Year of Publication: 2016
Published by: ನಾಗಶ್ರೀ ಪ್ರಕಾಶನ
Address: ಮುಳಕಟ್ಟೆ ರಸ್ತೆ, ಟಿ.ಬಿ. ಎಕ್ಸ್‌ಟೆನ್ಷನ್‌ , ನಾಗಮಂಗಲ ರಸ್ತೆ, ಮಂಡ್ಯ

Synopsys

ವಿಜಯಾ ಸುಬ್ಬರಾಜ್ ಅವರ ’ನಗರವಧು ಸಾಲವತಿ’ ನಾಟಕವು ಸ್ತ್ರೀವಾದಿ ಚಿಂತನೆಗಳೂ ವಿವರಿಸಲಾಗಿದೆ. ಒಂದು ಅವಧಿಯಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳು ಸಾಲವತಿ. ಮುಂದೆ ಆಕೆ ರಾಜರ ಸಾಮಂತರ ಸೂಳೆಯಾಗಿ, ಸಾರ್ವಜನಿಕ ವಸ್ತುವಾಗಿ ಪರಿಗಣಿತವಾಗಿ ದೈಹಿಕವಾಗಿ ಮಾನಸಿಕವಾಗಿ ಅನುಭವಿಸಿದ ನರಕಯಾತನೆಯ ಮೂಲಕ ಸೌಂದರ್ಯ ಸ್ಪರ್ಧೆ ಎಂತಹ ಅನಿಷ್ಟ ಪರಂಪರೆಗೆ ದಾರಿ ಮಾಡುತ್ತದೆ ಎನ್ನುವುದನ್ನು ಸ್ವಾನುಭವದ ಮೂಲಕ ಅರಿತು, ಅಂತಹ ಅನಿಷ್ಟ ಪರಂಪರೆಯನ್ನು ತನ್ನಿಂದಲೇ ನಿಲ್ಲುವಂತೆ ಮಾಡುವ ಒಂದು ಹೆಣ್ಣಿನ ಸಾಹಸಗಾಥೆಯೇ ಈ ನಾಟಕದ ವಸ್ತು.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books