ಪರಶುರಾಮ ಎಂಬ ನಾಟಕವು ಡಿ.ವಿ.ಜಿ ಅವರ ಕೃತಿಯಾಗಿದೆ. ನನ್ನ ಹಳೆಯ ದಫ್ತರಗಳಲ್ಲಿ ಅವಿತುಕೊಂಡು ಮರೆತುಹೋಗಿದ್ದ ಈ ಕೃತಿಯನ್ನು ಹೊರಕ್ಕೆ ತೆಗೆದವರು ಚಿ| ಶ್ರೀ ಬಿ.ಎಸ್. ಸುಬ್ಬರಾಯರವರು, ಅದನ್ನು ಅಸಲು ಕಾಪಿ ಮಾಡಿ ಅಚ್ಚಿಗೆ ಸಿದ್ಧಪಡಿಸಿದವರೂ ಅವರೇ, ಬಳಿಕ ಅಚ್ಚಿನ ಕರಡುಗಳನ್ನು ತಿದ್ದಿದವರು ಎಂದು ಪುಸ್ತಕದ ಮುದ್ರಣದ ಬಗ್ಗೆಯು ಡಿ.ವಿ.ಜಿ ಅವರು ಹೇಳಿದ್ದಾರೆ. ಸಾಹಿತ್ಯ ಪ್ರಕಾಶನವು ಈ ಕೃತಿಯನ್ನು ಮರುಮುದ್ರಿಸಿದೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE