ಲೇಖಕ ಟಿ.ಪಿ. ಕೈಲಾಸಂ ಅವರು ಬರೆದ ನಾಟಕ-`ನಮ್ ಕಂಪ್ ನಿ' ಅಥವಾ ಶೂರ್ಪನಖಾ ಕುಲವೈಭವ. ಕೃತಿಯು ಮೊದಲು 1943, 1947 ತದನಂತರ 1970 ರಲ್ಲಿ 3ನೇ ಆವೃತ್ತಿ ಕಂಡಿದೆ. ಸೂತ್ರಧಾರ, ನಟಿ, ರಾಜಾ(1) ಹಾಗೂ ರಾಜಾ (2) ಮಂತ್ರಿ, ಸೇನಾನಿ, ವಿಪ್ರ, ಋಷಿ, ಸಖಿಯರು, ರಾಣಿ, ವಂದಿ ಮಾಗಧರು, ಶೂರ್ಪನಖಾ ಹಾಗೂ ಇತರೆ ಪಾತ್ರಗಳು `ನಮ್ ಕಂಪ್ ನಿ' ನಾಟಕದ ಉದ್ದೇಶವನ್ನು ಪೂರ್ಣಗೊಳಿಸಿವೆ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE