ಲೇಖಕ ಲಿಂಗದೇವರು ಹಳೆಮನೆ ಅವರ ಕಿರು ನಾಟಕ ಸಂಗ್ರಹಗಳ ಕೃತಿ ʼ ಹಳೆಮನೆಯವರ ಕಿರು ನಾಟಕಗಳುʼ. ಪುಸ್ತಕದ ಕುರಿತು ಸ್ವತಃ ಲೇಖಕರೇ ಹೇಳುವಂತೆ, “ಈ ಸಂಕುಲದಲ್ಲಿ ನಾನು ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬರೆದ ಹನ್ನೊಂದು ಕಿರುನಾಟಕಗಳು ಸೇರಿವೆ. ಇವುಗಳಲ್ಲಿ ಬೀದಿ ನಾಟಕಗಳು, ಬಾನುಲಿ ನಾಟಕಗಳು ಮತ್ತು ರೂಪಕಗಳು ಸೇರಿವೆ. ಇಲ್ಲಿಯ ಅನೇಕ ನಾಟಕಗಳನ್ನು ಬೇರೆ ಬೇರೆ ನಿರ್ದಿಷ್ಟ ಸಂದರ್ಭಗಳಲ್ಲಿ ಬರೆಯಲಾಗಿದೆ. ನಾನು ಹಿಂದೆ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕನಾಗಿದ್ದಾಗ ಸಾಕ್ಷರತಾ ಆಂದೋಲನಾ ಕಾರ್ಯಕ್ರಮಕ್ಕೆ ಬೇಕಾದ ಪರಿಸರ ನಿರ್ಮಾಣಕ್ಕೆ ಬೀದಿನಾಟಕದ ಬಳಕೆ ಮಾಡಿಕೊಳ್ಳಬೇಕಾಯಿತು. ಹಾಗಾಗಿ ಅಕ್ಷರದ ಮಹತ್ವ, ವಿದ್ಯೆಯ ಮಹತ್ವ, ಜನಸಂಖ್ಯೆ ಹೆಚ್ಚಳದ ಪರಿಣಾಮ ಇತ್ಯಾದಿ ವಿಷಯಗಳನ್ನು ಕುರಿತು ಬೀದಿ ನಾಟಕಗಳನ್ನು ಬರೆಯಬೇಕಾಯಿತು. ಇಲ್ಲಿಯ ಎಲ್ಲಾ ನಾಟಕಗಳನ್ನೂ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡೇ ಬರೆಯಲಾಗಿದೆ. ಇಲ್ಲಿಯ ಎಲ್ಲಾ ನಾಟಕಗೂಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ ಕೂಡಾ. ಅಲ್ಲದೆ, ಈ ನಾಟಕಗಳು ಈಗಾಗಲೇ ಬೇರೆ ಬೇರೆ ಸಂಕುಲಗಳಲ್ಲಿ ಪ್ರಕಟಗೊಂಡಿವೆ. ಇಲ್ಲಿಯ `ಮನುಕುಲದ ಹಾಡು' ರೂಪಕವನ್ನು ಆಧರಿಸಿ ರಾಜ್ಯ ಸಂಪನ್ಮೂಲ ಕೇಂದ್ರ ಒಂದು ಧ್ವನಿಸುರುಳಿಯನ್ನು ಹೊರತಂದಿದೆ”. ಪುಸ್ತಕದ ಪರಿವಿಡಿಯಲ್ಲಿ ಮಂಕಾಸುರ ವಧೆ, ಮನುಕುಲದ ಹಾಡು, ಒಂದು ಅತ್ಯಾಚಾರವೆಂಬ ಪ್ರಹಸನವು, ಚುನಾವಣಾ ವೃತ್ತಾಂತ, ದುರ್ಯೋಧನನ ಆತ್ಮಹತ್ಯೆ, ಅಕ್ಷರವೇ ಆಸ್ತಿ, ವಿದ್ಯುದಾಲಿಂಗನ, ಕೋಡುಗನ ಕೋಳಿ ನುಂಗಿತ್ತ, ತು ಚೀಸ್, ತು ದಾಂಡ್, ತು ಬುದ್ ರೆಡೀ, ಜಾಗತೀಕರN ಮತ್ತು ಗ್ರಾಮ ಪಂಚಾಯಿತಿ ಹಾಗೂ ಉರಿಲಿಂಗ ಸೇರಿ 11 ಶೀರ್ಷಿಕೆಗಳಲ್ಲಿ ನಾಟಕಗಳಿವೆ.
©2024 Book Brahma Private Limited.