ರಾಜೇಂದ್ರ ಕಾರಂತರು, ನಟರು, ನಿರ್ದೇಶಕರು. ದೋಣಿ-ಅವರ ನಾಟಕ. ಸಂಭಾಷಣೆ, ಕಥಾ ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿಯಿಂದ ನಾಟಕವು ಗಮನ ಸೆಳೆಯುತ್ತದೆ.
ರಂಗಭೂಮಿಯ ನಟ, ನಿರ್ದೇಶಕ, ನಾಟಕಕಾರ ರಾಜೇಂದ್ರ ಕಾರಂತ್, 40ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ರಚಿಸಿದ್ದಾರೆ. 1500ಕ್ಕೂ ಹೆಚ್ಚು ರಂಗ ಪ್ರಯೋಗಗಳ ರೂವಾರಿ, ನಾಟಕ ಸ್ಪರ್ಧೆಗಳಲ್ಲಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ಹುಟ್ಟಿದ್ದು ಕುಂದಾಪುರದ ಕೋಣಿ ಗ್ರಾಮದಲ್ಲಿ. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ನಂತರ ಅವರು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ವೃತ್ತಿ ಜೀವನ ಆರಂಭಿಸಿದರು. ಇವರ ಮೂರು ನಾಟಕಗಳು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ರೇಡಿಯೋ, ಟಿವಿ, ಚಲನಚಿತ್ರ ಮಾಧ್ಯಮಗಳಲ್ಲೂ ಸಾಕಷ್ಟು ಹೆಸರು ಮಾಡಿರುವ ಕಾರಂತರಿಗೆ 2008ರ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೆ.ಎಸ್.ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆಯನ್ನು ...
READ MORE