ಡುಂಡಿರಾಜ್‍ರವರ ಈ ಪುಸ್ತಕವು ಹಾಸ್ಯನಾಟಕಗಳ ಸಂಕಲನ. ಇದು ಕೇವಲ ನಾಟಕಗಳ ಸಂಕಲನವಲ್ಲ, ಹನಿಕವಿತೆಗಳ ಜೊತೆ ಹಾಸ್ಯಮಯ ಸಂಧರ್ಭಗಳನ್ನು ಗಧ್ಯದ ರೂಪದಲ್ಲಿ ಹೊಂದಿರುವ ಹೊತ್ತಿಗೆ. ಕವಿತೆಗಳ ಪುಳಕದ ನಡುವೆ ಗದ್ಯ ಹಾಸ್ಯದಲ್ಲಿ ತಾವೇನೂ ಕಮ್ಮಿಯಿಲ್ಲ ಎಂದು ಕನ್ನಡ ಸಾಹಿತ್ಯ ಜಗತ್ತಿಗೆ ಸಾರಿ ಹೇಳಿದ ಡುಂಡಿ, ರಂಗದಲ್ಲಿ ಕೂಡ ತಮ್ಮ ಕೈಚಳಕ ತೋರಿದ್ದಾರೆ. ಬೇಕೆಂದಾಗ ತೋಚಿದಷ್ಟು ಬರೆದಾಗಲೂ ರಾಷ್ಟ್ರಮಟ್ಟದ ಮನ್ನಣೆ. ತೋಚಿದಾಗ ಬೇಕಾದಷ್ಟು ಬರೆದರೆ ಇನ್ನೇನಾಗಬಹುದೋ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE