‘ಮೋಹದ ದೀಪ’ ಮೂಡ್ನಾಕೂಡ ಚಿನ್ನಸ್ವಾಮಿ ಅವರ ಕತಾ ಸಂಕಲನ. ಈ ಕೃತಿಗೆ ಶಾಂತರಸ ಅವರ ಬೆನ್ನುಡಿಯ ಮಾತುಗಳಿವೆ. ಕನ್ನಡ ಕಾವ್ಯ ಲೋಕಕ್ಕೆ ಹೊಸ ಚಿಂತನೆಗಳಿಂದ ಕೂಡಿದ, ಮಹತ್ವವಾದ ಮೂರು ಕೃತಿಗಳನ್ನು ನೀಡಿದ ಚಿನ್ನಸ್ವಾಮಿಯವರು ಈಗ ಕಥಾಲೋಕವನ್ನು ಪ್ರವೇಶಿಸಿ ಹೊಸ ದಿಗಂತಗಳನ್ನು ತೆರೆಯುತ್ತಸಾಗಿರುವುದು ಅವರ ಸೃಜನಶೀಲ ಪ್ರತಿಭೆಗೆ ಮಿರುಗುವ ಇನ್ನೊಂದು ಗರಿ. ಕಥೆ ಬರೆಯುವುದು ಕಷ್ಟ, ಕಥೆಗಾರ ಸಂಯಮಿಯಾಗಿ ನಿರ್ಲಿಪ್ತನಾಗಿ ಕಥೆ ಹೇಳುವುದು ಸುಲಭಸಾಧ್ಯವಲ್ಲ, ಇದನ್ನು ಚಿನ್ನಸ್ವಾಮಿಯವರು ಸಾಧಿಸಿದ್ದಾರೆ ಎನ್ನುತ್ತಾರೆ ಶಾಂತರಸ. ಕಥೆಗೆ ತಕ್ಕಂತೆ ಭಾಷೆಯನ್ನು ನವನವೀನವಾಗಿ ದುಡಿಸಿಕೊಳ್ಳುವ ಅವರ ಕೌಶಲ್ಯ ಮೆಚ್ಚುವಂತಹುದು. ಮೋಹದ ದೀಪ ಕಥಾಸಂಕಲನ ಈವರೆಗೆ ಬಂದಿರುವ ಕಥಾಸಂಕಲನಗಳಿಗಿಂಥ ಭಿನ್ನವಾಗಿ ನಿಲ್ಲುತ್ತದೆ. ಕನ್ನಡ ಕಥೆ ಇನ್ನು ನಿರ್ಮಿಸಿಕೊಳ್ಳಬೇಕಾದ ಮಾರ್ಗದ ಹೊಳಹುಗಳನ್ನು ಸೂಚ್ಯವಾಗಿ ನೀಡುತ್ತದೆ ಎಂದಿದ್ದಾರೆ.
©2024 Book Brahma Private Limited.