‘ಭಕ್ತ ಶಬರಿ’ ತಿಲಕ ಅವರ ಗೀತಾ ನಾಟಕ ಕೃತಿಯಾಗಿದೆ. ಕಾಲ ಮತ್ತು ಜನಾಭಿರುಚಿಗೆ ಅನುಗುಣವಾಗಿ ನಾಟ್ಯಾಭಿವ್ಯಕ್ತಿಯ ಮಾಧ್ಯಮ ಪದ್ಯವೋ, ನೃತ್ಯ ಗೀತವೋ ಆಗಿ ಜನ ಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ನಾಟಕದಲ್ಲಿ ರಮಣೀಯತೆ, ರಂಜಕತೆಯ ಅಂಶಗಳನ್ನು ಉಳಿಸಿಕೊಂಡು ಬುದ್ಧಿಗಿಂತ ಭಾವಸ್ಪಂದನೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಿಕೊಡುವ, ಪ್ರೇಕ್ಷಣೀಯ ಪರಿಣಾಮಗಳನ್ನು ಹೆಚ್ಚು ನಿರೀಕ್ಷಿಸುವ ಗೀತನಾಟಕಗಳ ರಚನೆ ನಡೆಯುತ್ತಿರುವುದು ಪ್ರಶಂಸಾರ್ಹ ಸಂಗತಿ. ಈ ಗೀತನಾಟಕಗಳು ತೀರಾ ಇತ್ತೀಚಿನ ನಾಟ್ಯ ರೂಪಗಳೆನಿಸಿದರೂ ಇವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೇರಣೆ ನೀಡಿರುವ, ಪ್ರಾಚೀನ ನಾಟ್ಯ ಸಂಪ್ರದಾಯಗಳು ಪಾಶ್ಚಿಮಾತ್ಯ ಸಂಗೀತ ನಾಟ್ಯ ಸಂಪ್ರದಾಯಗಳೂ ಸಂಖ್ಯೆಯಲ್ಲಿ ಅಪಾರವಾಗಿದೆ.
ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ. ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...
READ MORE