ಮಹಾಭಾರತದಲ್ಲಿ ಕರ್ಣನ ಪಾತ್ರವು ಒಂದಲ್ಲಾ ಒಂದು ರೀತಿಯಲ್ಲಿ ಮಹತ್ವವನ್ನು ಪಡೆದಿದೆ. ಕರ್ಣನು ಭಾರತದ ನಾಯಕನಾಗಿ ಹಾಗು ದುರಂತ ನಾಯಕನಾಗಿ ಕಾಣುತ್ತಾನೆ, ಕರ್ಣನ ಕುರಿತು ಈ ಕೃತಿಯನ್ನು ಓದುತ್ತಾ ಹೋದಹಾಗೆ ಆ ಪಾತ್ರವು ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕೆಲವು ಕಡೆ ಈತನ ಮೇಲೆ ಸಿಟ್ಟೂ ಬರುತ್ತದೆ, ಜೂಜಿನ ಸಂದರ್ಭದಲ್ಲಿ, ದ್ರೌಪದಿಯನ್ನು ಅವಮಾನಿಸುವ ಸಂದರ್ಭದಲ್ಲಿ, ಯುದ್ಧದಲ್ಲಿ ಅಭಿಮನ್ಯುವಿನನ್ನು ಚಕ್ರವ್ಯೂಹ ಭೇದಿಸುವ ಸಮಯದಲ್ಲಿ ಆತನನ್ನು ಎಲ್ಲರೂ ಸೇರಿ ಕೊಂದು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಸಮಯದಲ್ಲಿ. (ಆಯ್ದ ಭಾಗ)
©2024 Book Brahma Private Limited.