‘ಗಾಂಪರ ಗುಂಪು’ ಕೃತಿಯು ದಾಶರಥಿ ದೀಕ್ಷಿತ್ ಅವರ ನಾಟಕ ಕೃತಿ. ಇಂಗ್ಲೆಡ್ ಪ್ರವಾಸಾನುಭವದ ಕಾದಂಬರಿ ರೂಪವಿದು. ಮಾತು ಮಾತಿಗೂ ನಗೆಯುಕ್ಕಿಸುವ ವಿಚಾರಗಳನ್ನುಪ್ರತಿ ದೃಶ್ಯಗಳು ಒಳಗೊಂಡಿವೆ. ಸಂಭಾಷಣೆಯೂ ಪರಿಣಾಮಕಾರಿಯಾಗಿವೆ. ’ಪಕೋಡ ಪ್ರಿಯ’ ನ ನಗೆ ಬಾಣಗಳಿಗೆ ಊರಗಲ ಬಾಯ್ತೆರೆದು ನಗದವರೇ ಇಲ್ಲ ಎನ್ನುವ ತಮ್ಮ ವ್ಯಾಖ್ಯಾನದ ಮೂಲಕ ‘ಗಾಂಪ’ ಪದಕ್ಕೆ ಒಂದು ವಿಶಿಷ್ಟ ರೂಪವನ್ನು ಕೊಟ್ಟಿದ್ದಾರೆ ಲೇಖಕ ದಾಶರಥಿ ದೀಕ್ಷಿತ.
ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ- ಬಾಲಾಜಿ ದೀಕ್ಷಿತ್, ತಾಯಿ- ಗಂಗೂಬಾಯಿ. ದಾಶರಥಿ ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ಪಡೆಯಬೇಕಾಯಿತು. ಆನಂತರದಲ್ಲಿ ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಪೂರ್ಣಗೊಳಿಸಿ, ಕಾಲೇಜನ್ನು ಬಿಟ್ಟು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಅವರು ತಮ್ಮ ಕತೆಯೊಂದನ್ನು ಪ್ರಜಾಮತ ಪತ್ರಿಕೆಯ ನಾಡಿಗೇರ್ ಕೃಷ್ಣರಾಯರಿಗೆ ನೀಡಿದ್ದರು. ಆ ಕತೆ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಲೇಖಕ ತ.ರಾ. ಸುಬ್ಬರಾಯರು ಒಮ್ಮೆ ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ ನೀನು ಲಘು ಬರಹವನು ರೂಢಿಸಿಕೋ ಎಂದು ...
READ MORE