ಪಾಶ್ಚಾತ್ಯ ಗಂಭೀರನಾಟಕಗಳು

Author : ಎಸ್.ವಿ. ರಂಗಣ್ಣ 

Pages 1220

₹ 50.00




Year of Publication: 1970
Published by: ಪ್ರಸಾರಾಂಗ
Address: ಮೈಸೂರು ವಿಶ್ವವಿದ್ಯಾನಿಲಯ 1970

Synopsys

‘ಪಾಶ್ಚಾತ್ಯ ಗಂಭೀರನಾಟಕಗಳು’ ಲೇಖಕ ಎಸ್.ವಿ. ರಂಗಣ್ಣ ಅವರು ಸಂಪಾದಿಸಿರುವ ನಾಟಕಗಳ ಸಂಕಲನ. ಈ ಕೃತಿಗೆ ಪ್ರಧಾನ ಸಂಪಾದಕರಾಗಿರುವ ಕೆ.ವಿ. ಪುಟ್ಟಪ್ಪ ಅವರ ಮುನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಪ್ರಸಾರಾಂಗದ ಈ ಪ್ರಕಟಣ ಕಾರ್ಯದಲ್ಲಿ ಡಾ.ಎಸ್.ವಿ. ರಂಗಣ್ಣನವರ ಪಾಶ್ಚಾತ್ಯ ಗಂಭೀರನಾಟಕಗಳು ಒಂದು ಮುಖ್ಯವಾದ ಘಟ್ಟವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಡಾ. ರಂಗಣ್ಣನವರು ವಿದ್ವಾಂಸರಾಗಿ ವಿಮರ್ಶಕರಾಗಿ ವಚನಕಾರರಾಗಿ ಖ್ಯಾತಿವೆತ್ತು ಗೌರವಕ್ಕೆ ಪಾತ್ರರಾಗಿರುವವರು. ಇಂಗ್ಲಿಷಿನಲ್ಲಿ ಅಪಾರ ಪಾಂಡಿತ್ಯ ಪಡೆದಿರುವವರು. ಅವರ ದೀರ್ಘಾವ್ಯಾಸಂಗದ ಮತ್ತು ವಿಶೇಷ ಪರಿಶ್ರಮದ ಫಲ ಈ ಬೃಹದ್ಗ್ರಂಥ. ನಾಟಕಸಾಹಿತ್ಯವನ್ನು ಕುರಿತು ಇಷ್ಟು ವ್ಯಾಪಕವಾದ ವಿಮರ್ಶಗ್ರಂಥ ಕನ್ನಡದಲ್ಲಿ ಮಾತ್ರವಲ್ಲ. ಬೇರೆ ಭಾರತೀಯ ಭಾಷೆಗಳಲ್ಲೂ ಅಪೂರ್ವವೆಂದೇ ಹೇಳಬೇಕು ಎನ್ನುತ್ತಾರೆ ಕೆ.ವಿ. ಪುಟ್ಟಣ್ಣ. ಜೊತೆಗೆ ಯುರೋಪ್ ಮತ್ತು ಅಮೆರಿಕಗಳಲ್ಲಿ ಪ್ರಾಚೀನಕಾಲದಿಂದ ಇದುವರೆಗೂ ಬಂದಿರುವ ವಿವಿಧ ರೀತಿಯ ದುರಂತನಾಟಕಗಳ ಪ್ರಾಚೀನಕಾಲದಿಂದ ಇದುವರೆಗೂ ಬಂದಿರುವ ವಿವಿಧ ರೀತಿಯ ದುರಂತನಾಟಕಗಳ ಮತ್ತು ನಾಟಕಕಾರರ ಸ್ಥೂಲಪರಿಚಯವನ್ನು ನಾವು ಈ ಗ್ರಂಥದಿಂದ ಪಡೆಯುತ್ತೇವೆ. ಈಸ್ಕಿಲಿಸ್, ಸಾಫ್ಹೊಕ್ಲಿಸ್ ಮೊದಲಾದ ಗ್ರೀಕ್ ನಾಟಕಕಾರದಿಂದ ಆರಂಭವಾಗಿ ಇತ್ತೀಚಿವನ ಇಟಲಿಯ ಪಿರಾಂಡೆಲೋ ಮತ್ತು ಅಮೆರಿಕದ ಟೆನಿಸ್ಸಿ ವಿಲಿಯಮ್ಸ್ ಆರ್ಥ್ ಮಿಲ್ಲರ್ ರವರೆಗೂ ನೂರಾರು ನಾಟಕಕಾರರ ಮತ್ತು ಅವರ ಕೃತಿಗಳ ಗುಣದೋಷಗಳ ವಿವರಣೆ ಮತ್ತು ವಿಮರ್ಶೆಗಳು ಈ ಗ್ರಂಥದಲ್ಲಿವೆ. ಬೇರೆಬೇರೆ ದೇಶಗಳಲ್ಲಿ ಗಂಭೀರ ನಾಟಕ ಯಾವ ದಾರಿಯನ್ನು ಹಿಡಿದು ನಡೆದಿದೆ ಎಂಬುದರ ಸ್ಥೂಲಚಿತ್ರ ನಮಗಿಲ್ಲಿ ದೊರೆಯುತ್ತದೆ. ದುರಂತನಾಟಕವನ್ನು ಗಂಭೀರನಾಟಕವೆಂದು ಕರೆಯುವುದು ಹೆಚ್ಚು ಉಚಿತವೆಂಬ ವಾದವನ್ನು ಹೂಡಿ ರಂಗಣ್ಣನವರು ನಮ್ಮ ಕುತೂಹಲವನ್ನು ಕೆರಳಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ದೃಢಪಡಿಸಲು ಅವರು ನಾಟಕಗಳಿಂದಲೂ ವಿಮರ್ಶಕರಿಂದಲೂ ವಾಕ್ಯಗಳನ್ನು ಬೇಕಾದಷ್ಟು ಉದ್ಧರಿಸಿಕೊಟ್ಟು ತಮ್ಮ ಗ್ರಂಥದ ಸತ್ವವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಎಸ್.ವಿ. ರಂಗಣ್ಣ 
(24 December 1898 - 17 February 1987)

ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ  1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921)  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ...

READ MORE

Related Books