ಮಹಿಳೆಯರಿಗೆ ಸಂಬಂಧಿಸಿದ 13 ಕಾನೂನುಗಳನ್ನು ಬಾನುಲಿ ನಾಟಕದ ರೂಪಕಗಳಾಗಿ ರೂಪ ಕೊಟ್ಟು ಬರೆದ ಕೃತಿಯೇ- ಹೆಣ್ಣೊಂದು ಕಲಿತರೆ. ಲೇಖಕಿ ಅನಿತಾ ಕೆ. ಗೋತಗಿ ಮೂಲತಃ ವಕೀಲರು. ಮಹಿಳೆಯರಲ್ಲಿ ಕಾನೂನು ಜಾಗೃತಿ ಮೂಡಿಸುವುದು ಈ ರೂಪಕಗಳ ಉದ್ದೇಶ. ಈ ನಾಟಕಗಳು ಕಲಬುರಗಿ ಹಾಗೂ ಹೊಸಪೇಟೆ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ.
ಕವಯತ್ರಿ ಅನಿತಾ ಕೆ. ಗೊತಗಿ ಅವರು ಕಾನೂನು ಪದವೀಧರೆ. ನ್ಯಾಯವಾದಿಯಾಗಿ ಸೇವೆ ಸಲ್ಲಿಸಿರುವ ಅವರು 1969 ಆಗಸ್ಟ್ 19 ಗುಲಬರ್ಗಾದಲ್ಲಿ ಜನಿಸಿದರು. ತಂದೆ ಕಿಶನರಾವ ಗೊತಗಿ, ತಾಯಿ ಸುಧಾಬಾಯಿ. ಕೌಟುಂಬಿಕ ನ್ಯಾಯಾಲಯದ ಸಮಾಲೋಚಕರು, ಕೃಷ್ಣಾ ಗ್ರಾಮೀಣ ಬ್ಯಾಂಕ್ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ಧಾರೆ. 'ಗೆಳತಿ' ಕವನ ಸಂಕಲನವನ್ನು 2000ದಲ್ಲಿ ಪ್ರಕಟಿಸಿದ್ದಾರೆ. ...
READ MORE