ಡಾ. ಕೆ. ಶಿವರಾಮ ಕಾರಂತರು ಬರೆದ ಏಕಾಂಕ ನಾಟಕಗಳ ಸಂಕಲನವಿದು. ಇಲ್ಲಿ ನಾರದ ಗರ್ವಭಂಗ, ಹಣೆಬರಹ, ಕಟ್ಟೆಪುರಾಣ ಹೀಗೆ ಮೂರು ಏಕಾಂಕ ನಾಟಕಗಳಿವೆ. ‘ನಾರದ ಗರ್ವಭಂಗ’ವು ಆತನನ್ನು ವಿಡಂಬನಾತ್ಮಕವಾಗಿ ಹಾಗೂ ವ್ಯಂಗ್ಯವಾಗಿ ಆತನಿಗೂ ಶಿಕ್ಷೆ ತಪ್ಪುವುದಿಲ್ಲ ಎಂಬ ಮಾರ್ಮಿಕ ಸಂದೇಶ ನೀಡಲಾಗಿದೆ. ಪೌರಾಣಿಕ ವ್ಯಕ್ತಿ ನಾರದ ಮುನಿಯನ್ನು ಭೂಲೋಕದ ಭೂಲೋಕದ ಮದನರಾಯ ಎಂಬುವನ ಪತ್ನಿ ಮಹಾಪತಿವ್ರತೆ ನರ್ಮದೆಯನ್ನು ಕಂಡುಬಾರೆಂದು ವಿಷ್ಣುವು ಕಳುಹಿಸುತ್ತಾನೆ. ಆದರೆ, ಜಗಳನ್ನು ಹಚ್ಚುವಲ್ಲಿ ತನ್ನನ್ನೂ ಮೀರಿಸುವ ಜನರಿದ್ದಾರೆಂದು ತಿಳಿದು ಆತ ಅಚ್ಚರಿಗೊಳ್ಳುತ್ತಾನೆ. ಭೂಲೋಕದ ಜನರು ಈ ನಾರದನನ್ನು ಹುಚ್ಚ ಎಂದು ತರ್ಕಿಸುತ್ತಾರೆ. . ಇಂತಹ ಜನರಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡರೆ ಸಾಕು ಎಂದು ನಾರದ ಭೂಲೋಕವನ್ನು ಬಿಟ್ಟು ಹೋಗುತ್ತಾನೆ. ಇಲ್ಲಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.
‘ಹಣೆಬರೆಹ’ ನಾಟಕದಲ್ಲಿ ನಿರಾಶವಾದಿಯೊಬ್ಬನ ಚಿತ್ರಣವಿದೆ. ಎಲ್ಲದಕ್ಕೂ ತನ್ನ ಹಣೆಬರಹವೇ ಕಾರಣ ಎಂಬುದು ಆತನ ವಾದ. ಇಂತಹವರಿಗೆ ಪಾಠ ಕಲಿಸುವ ರೀತಿಯಲ್ಲಿ ನಾಟಕದ ವಸ್ತುವನ್ನು ಸನ್ನಿವೇಶಗಳ ಮೂಲಕ ಹೆಣೆಯಲಾಗಿದೆ. ಕಟ್ಟೆಪುರಾಣ-ಇವರ ಮತ್ತೊಂದು ಸಾಮಾಜಿಕ ನಾಟಕ. ದಕ್ಷಿಣ ಕನ್ನಡ ಭಾಷೆಯಲ್ಲಿ ಶಬ್ದಗಳ ಪ್ರಯೋಗವಿದ್ದರೂ ಓದಿಸಿಕೊಂಡು ಹೋಗುತ್ತದೆ. ಊರಿನ ಜನರೆಲ್ಲ ಸೇರಿ ಅವರಿವರ ಸುದ್ದಿಗಳನ್ನು ಎತ್ತಿಕೊಂಡು ಬಾಯಿಗೆ ಬಂದಂತೆ ಟೀಕಿಸುವುದು ಇಲ್ಲಿಯ ಕಥಾ ವಸ್ತು.
ಪಂಜೆ ಮಂಗೇಶರಾಯರು ಕೃತಿಗೆ ಮುನ್ನುಡಿ ಬರೆದು ‘ಹಳ್ಳಿಯವರ ಜನಜೀವನವನ್ನು ಸಮರ್ಥವಾಗಿ ಚಿತ್ರಿಸುವ ಹಾಗೂ ಚಿಕ್ಕ ಚಿಕ್ಕ ನಾಟಕಗಳನ್ನು ಬರೆಯುವ ಕನ್ನಡ ವಾಙ್ಮಯ ಸ್ವಾಮಿಗಳು, ಕನ್ನಡ ಭಾಷಾ ಪ್ರೇಮಿಗಳು ದಕ್ಷಿಣ ಕನ್ನಡದ ಇಂತಹವರಲ್ಲಿ ಪ್ರಥಮ ವರ್ಗಕ್ಕೆ ಸೇರತಕ್ವವರು ಕೋಟದ ಶಿವರಾಮ ಕಾರಂತ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.