ನಾಡಪ್ರಜ್ಞೆಯ ಕನಸುಗಾರ

Author : ಸಂಗಮೇಶ ತಮ್ಮನಗೌಡ್ರ

Pages 40

₹ 45.00




Year of Publication: 2018
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 101
Phone: 9449074397

Synopsys

ಕರ್ನಾಟಕ ಕುಲಪುರೋಹಿತ, ಹಿರಿಯ ಸಾಹಿತಿ, ಹೋರಾಟಗಾರ ಆಲೂರು ವೆಂಕಟರಾಯರ ಜೀವನ ವೃತ್ತಾಂತ ವಿವರಿಸುವ ನಾಟಕ-ನಾಡಪ್ರಜ್ಞೆಯ ಕನಸುಗಾರ. ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ರಚಿಸಿದ್ದು, ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಆಲೂರು ವೆಂಕಟರಾಯರ ಜೀವನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ನಾಟಕದ ಉದ್ದೇಶ. ಆಲೂರು ವೆಂಕಟರಾಯರ ಸಮಕಾಲೀನರಾದ ಶಂಬಾ, ಬೇಂದ್ರೆ ಅವರ ಪಾತ್ರವನ್ನು ಸಹ ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶಾಲೆ-ಕಾಲೇಜುಗಳಲ್ಲಿ ರಂಗಪ್ರಯೋಗಕ್ಕೆ ಅನುಕೂಲವಾಗುವ ದೃಷ್ಟಿಯಿಂದ ನಾಟಕ ರಚಿಸಿದೆ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books