ದೋಣಿಯ ಬಿನದ ಮತ್ತು ಕವಿ

Author : ಪು.ತಿ.ನ. (ಪು.ತಿ. ನರಸಿಂಹಾಚಾರ್ )

Pages 82




Year of Publication: 1943
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

ಕವಿ ಪು.ತಿ.ನ (ಪು.ತಿ.ನರಸಿಂಹಾಚಾರ್ಯರು) ಅವರ ದೋಣಿಯ ಬಿನದ ಮತ್ತು ಕವಿ- ಎರಡು ಏಕಾಂಕ ನಾಟಕಗಳು. ನವತರುಣ, ನವ ತರುಣಿ, ಮೂವರು ಯುವಕರು ಹಾಗೂ ಮೂವರು ಯುವತಿಯರು ಹಾಗೂ ಜಲಕನ್ಯೆಯರು ಪಾತ್ರಗಳನ್ನು ಒಳಗೊಂಡ ನಾಟಕದ ಕಾಲವು ಸಂಜೆ ಮತ್ತು ನಸುಕು. ಈ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯೇ ಈ ಏಕಾಂಕದ ಮೂಲ ವಸ್ತು. ಪ್ರಣಯ-ವಿನೋದ, ಪ್ರಕೃತಿ-ಮಾನವ ಸಂಬಂಧ ಹೀಗೆ ಕಥೆಯನ್ನು ಹೆಣೆದುಕೊಂಡಿದ್ದರೆ ಕವಿ-ಏಕಾಂಕ ನಾಟಕವು. ಗಿರಿ, ವನ, ನದಿ, ಚೆಲುವು, ಮಾನವನ ತೇಜಸ್ಸುಕಂಡ ಕವಿಯ ಮನಸ್ಸು ಪ್ರಶ್ನೆಗಳನ್ನು ಮಾಡುತ್ತಲೇ ರಹಸ್ಯಗಳನ್ನು ಅರಿಯಲು ಯತ್ನಿಸುತ್ತದೆ. ಕವಿ., ಕವಿಪತ್ನಿ, ಮುಂದಾಳು ಮತ್ತು ನೇಹಿಗರು, ಯಕ್ಷ, ಮಲೆ, ಬನದೇವಿ, ಹೊನಲ ರಾಣಿ, ಮಾರುತ, ಮಾನವ ತೇಜಸ್ಸು, ಚೆಲುವ ದೇವಿ, ಹೀಗೆ ಪಾತ್ರಗಳಿವೆ. ನಾಟಕದ ಕಾಲ ಎಳಹಗಲು ಮತ್ತು ನಡುಹಗಲು.

About the Author

ಪು.ತಿ.ನ. (ಪು.ತಿ. ನರಸಿಂಹಾಚಾರ್ )
(17 March 1905 - 13 October 1998)

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...

READ MORE

Related Books