ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ ಕೃತಿ-ಸೂಳೆ ಅಥ್ವಾ ಒಲವಿನ ಕೊಲೆ. ಮೊದಲನೇ ವಿಟ, ಎರಡನೇ ವಿಟ, ಸೂಳೆ, ಸೂಳೆಯ ತಾಯಿ, ಸೂಳೆಯ ಮಗಳು, ಲೇಡಿ ಶಿವದಾಸ ಅಯ್ಯರ್, ನಂಜ-ಜವಾನ್-ಈ ಪಾತ್ರಗಳ ಮೂಲಕ ಸಮಾಜದ ಕರಾಳ ವ್ಯವಸ್ಥೆಯನ್ನು ಪ್ರೇಕ್ಷಕರೆದುರು ಇಡುವ ಪ್ರಯತ್ನ ಇಲ್ಲಿದೆ. ಅಪ್ರಾಪ್ತ ಬಾಲಕನೊಬ್ಬ (ಎರಡನೇ ವಿಟ) ಸೂಳೆಯಲ್ಲಿ ಅನರಕ್ತನಾಗುವ ಪರಿ ಹಾಗೂ ಬಾಲಕನ ಬಾಳೆ ಹಾಳಾಗುವ ಮತ್ತು ಇಂತಹ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುತ್ತಾ ಬಂದ ದುಷ್ಕರ್ಮಿಗಳ ಸಂಚನ್ನು ಈ ನಾಟಕ ಧ್ವನಿಸುತ್ತದೆ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE