ಸಸಾರ ಅಲ್ಲವೋ ಸಂಸಾರ ರಾಧಿಕಾ ಕಾಖಂಡಿಕಿ ಅವರ ಅನುವಾದಿತ ಕೃತಿಯಾಗಿದೆ ಉಮರ್ಜಿಕರರ ಈ ನಾಟಕ ಮುಖ್ಯವಾಗಿ ಒಂದು ವಿಘಟಿತ ಕುಟುಂಬದ ನೋವುಗಳ ಕತೆ ಹೇಳುತ್ತಿದೆ. ಆದರೂ ಅದು ಆಧುನಿಕ ಬಗೆಯ ಪಶ್ಚಿಮ ಪ್ರಣೀತ ಕಣ್ಣುಗಳಿಂದ ಕಂಡ ದೃಶ್ಯಗಳು ಆಗಿಲ್ಲ. ಪ್ರೊ. ರಾಜೆನನ್ನು ಬಿಟ್ಟು ಹೋಗುವ ರೇಖಾ ಸ್ತ್ರೀವಾದಿ ನಿಲುವಿನ ಮಾದರಿಯ ರೋಷ ಉಳ್ಳವಳೂ ಆಗಿಲ್ಲ. ತಾಯಿಯಿಂದಲೂ ಪ್ರೀತಿ ದಕ್ಕದ ಗೀತಾಳ ಸಿಟ್ಟು ಕೂಡ ಒಂದು ಭಾವ ಜಗತ್ತಿನ ಸಹಜ ಪ್ರಕ್ರಿಯೆ ಆಗಿದೆಯೇ ವಿನಃ ಅದು ಆಧುನಿಕ ಅರ್ಥದ ವಿದ್ರೋಹವಾಗಿಲ್ಲ. ಕೇಡು ಅನ್ನೋ ಪ್ರವೃತ್ತಿಯು ಸ್ತ್ರೀಯ ಒಳಗೂ ಇರುತ್ತದೆ. ಪುರುಷರಲ್ಲಿಯೂ ಇರುತ್ತದೆ. ಅದರ ಸಂಘರ್ಷದಲ್ಲಿ ಹುಟ್ಟುವ ದುಃಖವು ಅದು ಸಂಸಾರದ ದುಃಖದ ಕತೆಯೇ ಹೊರತು ವಾದ - ವಿವಾದಗಳಿಂದ ಹುಟ್ಟಿದ ಪ್ರಕರಣವಲ್ಲ. ಈ ಸಾರಸ್ವತ ಅರಿವು ಈ ಮೂಲ ಕೃತಿಯಲ್ಲಿಯೇ ಇದೆ.
©2024 Book Brahma Private Limited.