ಒಳಸಂಚು ಎಂಬ ಪುಸ್ತಕವು ಬಿ ಎಸ್ ವೆಂಕಟರಾಮ್ ಅವರ ಕೃತಿಯಾಗಿದೆ. ಒಂದೆರಡು ಐತಿಹಾಸಿಕ ಘಟನೆಗಳ ಸುತ್ತ ಈ ನಾಟಕವನ್ನು ಹೆಣೆದಿದ್ದೇನೆ. ನನ್ನ ಉದ್ದೇಶ ಎಷ್ಟರಮಟ್ಟಿಗೆ ಸಫಲವಾಗಿದೆಯೋ ಅದನ್ನು ಕನ್ನಡಿಗರು ಹೇಳಬೇಕು, ಎಂದು ಲೇಖಕರು ಹೇಳಿದ್ದಾರೆ
ಲೇಖಕ ಬಿ.ಎಸ್. ವೆಂಕಟರಾಮ್ ಅವರು ಮೂಲತಃ ಬೆಂಗಳೂರಿನವರು. ತಂದೆ-ಬಿ.ವಿ. ಸುಬ್ಬರಾವ್, ತಾಯಿ- ಗೌರಮ್ಮ. ರಂಗಭೂಮಿ ಹಾಗೂ ಪತ್ರಿಕಾರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, 14ನೇ ವಯಸ್ಸಿನಲ್ಲಿಯೇ ಶಶಿರೇಖಾ ಪರಿಣಯದ ಕೃಷ್ಣನಾಗಿ ರಂಗಪ್ರವೇಶ ಪಡೆದರು. ಕೈಲಾಸಂ ಅವರ ಗರಡಿಯಲ್ಲಿ ಪಳಗಿದರು. ಅಲ್ಲಿಂದ ಹಲವಾರು ನಾಟಕಗಳಲ್ಲಿ ನಟಿಸಿದರು. ಕೈಲಾಸಂರ ಬಹಳಷ್ಟು ನಾಟಕಗಳ ಲಿಪಿಕಾರರಾಗಿಯೂ ದುಡಿದರು. ಇವರ ನಿರ್ದೇಶನದ ಚಲನಚಿತ್ರ- ‘ಬಹದ್ದೂರ್ ಗಂಡು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸರಕಾರದ ರಂಗಭೂಮಿ ಸಲಹಾ ಸಮಿತಿ ಅಧ್ಯಕ್ಷರಾಗಿ, ಸಂಗೀತ ನಾಟಕ ಅಕಾಡಮಿಯ ಹಲವಾರು ಕಾರ್ಯಕ್ರಮಗಳ ರೂವಾರಿಯಾಗಿ, ಪಶ್ಚಿಮ ಬಂಗಾಲದ ಸಂಗೀತ ನಾಟಕ ಅಕಾಡಮಿಯ ಸಮೀಕ್ಷಕರಾಗಿ, ರಾಜ್ಯದ ನಾಟಕ ಪಠ್ಯಪುಸ್ತಕ ...
READ MORE