‘ಯಾರ ತಪ್ಪು? ಯಾರಿಗೆ ಶಿಕ್ಷೆ?’ ಅಥವಾ ‘ವಿಲಾಸಿ ಗಂಡನ ವಿರಾಟರೂಪ’ ಎಂಬುದು ಲೇಖಕ ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರ ಕೌಟುಂಬಿಕ ನಾಟಕ. ಒಂದು ಕುಟುಂಬದ ಸೊಸೆಯ ಸುತ್ತ ಕಥೆ ಹೆಣೆಯಲಾಗಿದೆ. ಕುಡುಕ ಗಂಡ, ಕಾಡುವ ಅತ್ತೆ ಜೊತೆಗೆ ಬಂಧುಬಳಗದವರು ಕೊಡುವ ತೊಂದರೆಗಳೊಂದಿಗೆ ಜೀವನ ಸಾಗಿಸುವ ಸೊಸೆ ಪಾತ್ರದ ಮೂಲಕ ಭಾರತೀಯ ಮಹಿಳೆಯರ ಸ್ಥಿತಿಯನ್ನು ಚಿತ್ರಿಸಲಾಗಿದೆ. ಭಾಷೆ ಸರಳವಾಗಿದ್ದು, ಸಂಭಾಷಣೆಯು ಪರಿಣಾಮಕಾರಿಯಾಗಿದೆ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE