‘ವಾರಸುದಾರಾ’ ಕೃತಿಯು ಜಯರಾಮ್ ರಾಯಪುರ ಅವರ ನಾಟಕ ಕೃತಿಯಾಗಿದೆ. ಶಹಜಹಾನನ ವಾರಸುದಾರಿಕೆಗೆ ಜರುಗಿದ ಮಕ್ಕಳ ನಡುವಿನ ಸಂಘರ್ಷದ ಐತಿಹಾಸಿಕ ನಾಟಕವಾಗಿ ಈ ಕೃತಿಯು ಹೊರಹೊಮ್ಮಿದೆ. ಐತಿಹಾಸಿಕ ಘಟನೆಗಳೇ ಈ ಕೃತಿಯ ಜೀವಾಳವಾಗಿದ್ದು, ಯುದ್ಧ, ರಾಜಪಟ್ಟ ಹೀಗೆ ಅನೇಕ ಘಟನಾವಳಿಗಳ ಸುತ್ತ ಕತೆಯನ್ನು ಕಟ್ಟಲಾಗಿದೆ. ಇಲ್ಲಿ ಶಹಜಹಾನನ ಕಾರ್ಯವೈಖರಿಯನ್ನು ಲೇಖಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಘಟನಾ ಪ್ರಧಾನ ರಚನೆಯನ್ನು ಹೊಂದಿರುವ ಈ ನಾಟಕ ಕೃತಿ ಈಗಾಗಲೇ ಹಲವಾರು ಪ್ರದರ್ಶನವನ್ನು ಕಂಡಿರುತ್ತದೆ. ನಾಟಕವು ನಾಲ್ಕು ಅಂಕ ಮತ್ತು ಹದಿನಾರು ದೃಶ್ಯಗಳಿಂದ ಕೂಡಿದ ಸುಮಾರು ನೂರುಪುಟಗಳ ಒಂದು ಪೂರ್ಣಾವಧಿ ನಾಟಕವಾಗಿದೆ. ಮೊದಲ ಅಂಕಗಳ ಐದು ದೃಶ್ಯಗಳ ‘ಆಶಾಂತಿ ಪರ್ವ’, ಎರಡನೆಯ ಅಂಕದ ಏಳು ದೃಶ್ಯಗಳ ‘ಯುದ್ದಪರ್ವ ’ ಮೂರನೇ ಅಂಕದ ಏಳು ದೃಶ್ಯಗಳ ದ್ವೇಷಪರ್ವ’ ಹಾಗೂ ನಾಲ್ಕನೇ ಅಂಕದ ಒಂದು ದೃಶ್ಯದ ‘ಕೊನೆಯ ಮೊದಲ ಪರ್ವ’ , ಹೀಗೆ ನಾಟಕಕಾರರು ನಾಟಕದ ನಾಲ್ಕು ಅಂಕಗಳನ್ನು ನಾಲ್ಕು ಪರ್ವಗಳನ್ನಾಗಿಸಿಕೊಂಡಿದ್ದಾರೆ. ನಾಟಕದ ಬಂಧವನ್ನು ಹಾಗೆ ಮಾಡುವುದರ ಮೂಲಕ ನಾಟಕಕಾರರು ಭಾರತದ ಮಧ್ಯಕಾಲೀನ ಇತಿಹಾಸದ ಮುಸ್ಲಿಂ ಆಡಳಿತಗಾರರಲ್ಲಿ ಅಧಿಕಾರಕ್ಕಾಗಿ ನಡೆ ದಾಯಾದಿಗಳ ಸಂಘರ್ಷದ ರೀತಿಯಲ್ಲಿ ಗ್ರಹಿಸಬಹುದೇನೋ ಎಂಬುದನ್ನು ನಾಟಕದಲ್ಲಿ ಸೂಚಿಸುತ್ತಾರೆ.
©2024 Book Brahma Private Limited.