ಅಭಿನವ ಕಾಳಿದಾಸ ಎಂದೇ ಖ್ಯಾತಿಯ ಬಸವಪ್ಪ ಶಾಸ್ತ್ರಿಗಳು ರಚಿಸಿದ ಕೃತಿ-ಕರ್ಣಾಟಕ ಶಾಕುಂತಲಾ ನಾಟಕವು. ಇದಕ್ಕೂ ಮುನ್ನ ಕೃತಿಯು ಮೂರು ಮುದ್ರಣ ಕಂಡಿದೆ. ಶಾಕುಂತಲಾ-ದುಷ್ಯಂತ-ಕಣ್ವ ಮುನಿಗಳು ಹೀಗೆ ನಾಟಕವು ಅಂಕಗಳ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಂಭಾಷಣೆಯು ಸರಳಗನ್ನಡದಲ್ಲಿದ್ದು, ಓದುಗರಿಗೆ ತೊಂದರೆಯಾಗದು.
ಪಂಡಿತರು, ಭಾಷಾಂತರಕಾರರು, ಅಭಿನವ ಕಾಳಿದಾಸ ಎಂದೇ ಖ್ಯಾತಿಯ ಬಸವಪ್ಪ ಶಾಸ್ತ್ರಿ 1843 ಮೇ 02 ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ನಾರಸಂದ್ರ ಗ್ರಾಮದಲ್ಲಿ ಜನಿಸಿದರು. ತಮ್ಮ 18ನೇ ವಯಸ್ಸಿನಲ್ಲಿ ' ಕೃಷ್ಣರಾಜಾಭ್ಯುದಯ' ಎಂಬ ಕಾವ್ಯವನ್ನು ರಚಿಸಿ ಪ್ರಖ್ಯಾತರಾದರು. ಸಂಗೀತದಲ್ಲೂ ಉತ್ತಮ ಜ್ಞಾನ ಗಳಿಸಿಕೊಂಡ ಅವರು ಕಾಳಿದಾಸನ ಪ್ರತಿಭೆಗೆ ಕುಂದಿಲ್ಲದಂತೆ ಸಂಸ್ಕೃತ ಮೂಲದ ಕಾಳಿದಾಸನ ನಾಟಕ 'ಶಾಕುಂತಲ'ವನ್ನು 1883ರಲ್ಲಿ ಮೂಲದ ಸೌಂದರ್ಯ, ಲಾಲಿತ್ಯ , ಓಜಸ್ಸುಗಳಿಗೆ ಚ್ಯುತಿ ಬಾರದಂತೆ ಕನ್ನಡಕ್ಕೆ ಭಾಷಾಂತರಿಸಿದರು. 'ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಅವರ ಅನೇಕ ನಾಟಕಗಳನ್ನು ರಂಗಭೂಮಿಯ ಮೇಲೆ ಪ್ರದರ್ಶಿಸಿತು. ಈ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಬಸವಪ್ಪ ...
READ MORE