ಅಮ್ಮಾವ್ರ ಗಂಡ

Author : ಟಿ.ಪಿ. ಕೈಲಾಸಂ

Pages 104

₹ 1.00




Year of Publication: 1943
Published by: ಮಾಧವ ಸನ್ಸ್
Address: ಬೆಂಗಳೂರು

Synopsys

ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ-ಅಮ್ಮಾವ್ರ ಗಂಡ. ಅಮ್ಮಾವ್ರು, ಗಂಡ, ಯಜಮಾನ್ರು, ಹೆಂಡ್ತಿ ಹಾಗೂ ಆಯಾ - ಈ ಪಾತ್ರಗಳ ಮೂಲಕ ನಾಟಕದ ಕಥಾ ವಸ್ತು ಹೆಣೆದುಕೊಂಡಿದೆ. ಆಯಾ ಪಾತ್ರಗಳು ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಡುವಂತೆ ವರ್ತಿಸುತ್ತವೆ. ಆ ಮೂಲಕ ಮಹತ್ವದ ತಿಳಿವಳಿಕೆಯನ್ನು ಮರೆತು ಬಿಡುತ್ತವೆ ಎಂಬ ಹಾಸ್ಯಪ್ರಧಾನವಾಗಿ ಬಿಂಬಿಸುವ ನಾಟಕವಿದು.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books