‘ಅವಿತಿಟ್ಟ ಅಂಬೇಡ್ಕರ್’ ಕೃತಿಯು ಪ್ರವೀಣ್ ಕುಮಾರ್ ಮಾವಿನಕಾಡು ಹಾಗೂ ಸುಧಾಕರ ಹೊಸಳ್ಳಿ ಅವರ ಸಂಪಾದಿತ ಸಂಶೋಧಿತ ನಾಟಕ ಕೃತಿಯಾಗಿದೆ. ಅಂಬೇಡ್ಕರ್ ಮಹಾನಾಯಕನಾದ ನಂತರದ ಅಪಮಾನಗಳ ಅನಾವರಣವಾಗಿ ಈ ಕೃತಿ ಹೊರಬಂದಿದೆ. ಶೋಷಿತರ ರಾಜಕೀಯ ಮುಖವಾಣಿ ಆಗುವ ಮೂಲಕ ಬಹುದೊಡ್ಡ ಶೋಷಿತ ಸಮಾಜದ ದಲಿತ ಮತ್ತು ಹಿಂದುಳಿದ ವರ್ಗಗಳ ಪ್ರಜೆಗಳು ರಾಜಕೀಯವಾಗಿ ತಮ್ಮ ಪ್ರಾತಿನಿಧ್ಯ ಹೆಚ್ಚಿಸಿಕೊಂಡುಬಿತ್ತಾರೆಂಬ ಏಕೈಕ ಉದ್ದೇಶಕ್ಕಾಗಿ, ಕಾಂಗ್ರೆಸ್ ಪಕ್ಷ ಹೇಳಿದ್ದನ್ನೂ ಅಲ್ಲಿ ಉಲ್ಲೇಖಿಸಲಾಗಿತ್ತು. ದೇಶ ಕಂಡ ಒಬ್ಬ ಮಹಾನ್ ನಾಯಕನಿಗೆ ಅವರದ್ದೇ ಆದ ಸಂಘಟನೆ ಏನೆಲ್ಲವನ್ನು ಮಾಡಿತು, ಹೇಳಿತು ಎಂಬುದರ ಅನಾವರಣವೇ ‘ಅವಿತಿಟ್ಟ ಅಂಬೇಡ್ಕರ್’ ಅಂಬೇಡ್ಕರ್ ಅವರ ಬದುಕಿನಲ್ಲಿ ಅವರು ಅನುಭವಿಸಿದ ಅಪಮಾನ, ಹಿಂಸೆ, ನಂತರ ಅವರನ್ನು ವ್ಯವಸ್ಥಿತವಾಗಿ ತುಳಿಯಲು ಪ್ರಯತ್ನಪಟ್ಟಿದ್ದು, ಈ ದೇಶವನ್ನು 70 ವರ್ಷಗಳ ಕಾಲ ಆಳಿದ ರಾಜಕೀಯ ಪಕ್ಷವೇ ಎನ್ನಲು ಸಾಕಷ್ಟು ಆಧಾರಗಳು ಸಿಗುತ್ತಲೇ ಸಾಗುತ್ತವೆ. ಏನಲ್ಲಾ ಸಂಗತಿಗಳನ್ನು ಯೋಜನಾಬದ್ದವಾಗಿ ದೇಶದ ಎದುರು ಇಷ್ಟೊಂದು ದೀರ್ಘಕಾಲ ಮುಚ್ಚಿಡುತ್ತಾ ಬಂದ ಸಂಘಟನೆಯ ಕಾರ್ಯವೈಖರಿಯನ್ನು ತೆರೆದಿಡುತ್ತಾ, ಓದುಗರನ್ನು ಆಲೋಚನೆಗೆ ಹಚ್ಚುತ್ತಾ, ನಡೆದು ಹೋದ ಸತ್ಯದ ದರ್ಶನವನ್ನು ಮಾಡಿಸುತ್ತದೆ ‘ಅವಿತಿಟ್ಟ ಅಂಬೇಡ್ಕರ್’ ಕೃತಿ.
ಅಂಕಣಕಾರ ಸುಧಾಕರ ಹೊಸಳ್ಳಿ ಅವರು ಸಂವಿಧಾನ ವಿಶ್ಲೇಷಕ ಹಾಗೂ ಪ್ರಾದೇಶಿಕ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಾಧ್ಯಕ್ಷ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯಲ್ಲಿ ಕಾರ್ಯಪ್ರವೃತ್ತರಾಗಿರುವ ಅವರು, ಪ್ರಸ್ತುತ ಅ.ಭಾ.ಸಾ.ಪ.ವಿಭಾಗದಲ್ಲಿ ಸಂಯೋಜಕರಾಗಿದ್ದಾರೆ. ಕೃತಿಗಳು ; ಅವಿತಿಟ್ಟ ಅಂಬೇಡ್ಕರ್ ...
READ MORE