ಖ್ಯಾತ ರಂಗಕರ್ಮಿ ಪ್ರಸನ್ನ ಅವರ ಕೃತಿ-ಆಚಾರ್ಯ ಪ್ರಹಸನ ಮತ್ತು ಎನ್. ಹುಚ್ಚೂರೀ. ಈ ಕೃತಿಯಲ್ಲಿ ಎರಡು ಪ್ರಹಸನಗಳಿವೆ. ‘ಆಚಾರ್ಯ ಪ್ರಹಸನ’ ದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಬೂಟಾಟಿಕೆ ಇದೆ. ಸೂರದಾಸ, ರವಿದಾಸನಂತಹ ಸಂತರು ಇಂದು ಇಲ್ಲವೆಂದಲ್ಲ; ಅಂತಹ ಸಂತರು ಇಂದು ಇದ್ದು ಅವರನ್ನು ಗುರುತಿಸುವ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದ್ದೇವೆ. ಬರೀ ಬೂಟಾಟಿಕೆಯ-ಢೋಂಗಿ ವೇಷಧಾರಿಗಳ ಅಬ್ಬರ ಹೆಚ್ಚುತ್ತಿದೆ. ಒಟ್ಟಿನಲ್ಲಿ ಧಾರ್ಮಿಕ ಆಷಾಡಭೂತಿತನವನ್ನು ವಿಡಂಬಿಸುತ್ತದೆ. ಎರಡನೇ ಪ್ರಹಸನ-ಎನ್. ಹುಚ್ಚೂರೀ. ಇವು ಎರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ ಪ್ರಹಸನ’ವು ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ.
©2024 Book Brahma Private Limited.