‘ಆಕಾಶ ನಾಟಕಗಳು’ ಗೌರೀಶ ಕಾಯ್ಕಿಣಿ ಅವರ ನಾಟಕ ಸಂಕಲನ. ಈ ಕೃತಿಗೆ ಶಿವರಾಮ ಕಾರಂತ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲದಿಂದ ವ್ಯವಸಾಯ ಮಾಡುತ್ತ ಬಂದವರು ಈ ಸಂಕಲನದ ಲೇಖಕರಾದ ಗೌರೀಶ ಕಾಯ್ಕಿಣಿಯವರು. ಅವರು ಬಹಳ ಹಿಂದಿನಿಂದಲೂ ಪತ್ರಿಕೆಗಳಿಗೆ ವಿಶೇಷ ಬರಹಗಳನ್ನು ಕಳುಹಿಸುತ್ತಿದ್ದಂತೆ ಸಾಹಿತ್ಯವನ್ನು ಕುರಿತು ಅಭ್ಯಾಸಪೂರ್ಣವಾದ ವಿಮರ್ಶೆಗಳನ್ನು ಬರೆಯುತ್ತ ಬಂದಿದ್ದಾರೆ. ವಿವಿಧ ವಿಷಯಗಳನ್ನು ಕುರಿತು ಅಭ್ಯಾಸಶೀಲ ಜೀವನ ಅವರದ್ದು, ಅವರು ಬರೆದ ಹಲವಾರು ಕೃತಿಗಳಲ್ಲಿ, ಬಾನುಲಿಯ ಸಲುವಾಗಿ ಅವರು ರಚಿಸಿರುವ ಕೆಲವೊಂದು ಕಿರುನಾಟಕಗಳು ಪ್ರಕಟವಾಗದೆ ಉಳಿದಿವೆ. ಈಗ ಅವನ್ನು ಒಂದು ಸಂಕಲನವಾಗಿ ಸಾಗರದ ಅಕ್ಷರ ಪ್ರಕಾಶನ ಸಂಸ್ಥೆಯವರು ಪ್ರಕಟಿಸಲು ಮುಂದೆ ಬಂದದ್ದು ಸಂತೋಷದ ವಿಷಯ ಎಂದಿದ್ದಾರೆ ಶಿವರಾಮ ಕಾರಂತರು.
©2024 Book Brahma Private Limited.