ಜೋಡಿ ನಾಟಕಗಳು

Author : ಬಸವರಾಜ ಸಬರದ

Pages 176

₹ 160.00




Year of Publication: 2022
Published by: ಶ್ರೀರಾಮ ಪ್ರಕಾಶನ
Address: ಮಂಡ್ಯ- 571401
Phone: 9448930173

Synopsys

‘ಜೋಡಿ ನಾಟಕಗಳು’ ಬಸವರಾಜ ಸಬರದ ಅವರ ನಾಟಕ ಸಂಕಲನ. ಈ ಕೃತಿಯಲ್ಲಿ ಎರಡು ನಾಟಕಗಳಿವೆ. ಭರತ- ಬಾಹುಬಲಿ ಮೊದಲನೇ ನಾಟಕವಾದರೆ ಶಿವಯೋಗಿ ಸಿದ್ಧರಾಮ ಎರಡನೇ ನಾಟಕವಾಗಿದೆ. ಜೈನಧರ್ಮಕ್ಕೂ -ಶರಣಧರ್ಮಕ್ಕೂ ಮೊದಲಿನಿಂದ ಸಂಬಂಧವಿದೆ. ಈ ಎರಡೂ ನಾಟಕಗಳು ಜೈನಧರ್ಮದ-ಶರಣಧರ್ಮದ ಸಾಧ್ಯತೆಗಳನ್ನು ಪ್ರಕಟಿಸುತ್ತವೆ.ಈ ನಾಟಕಗಳಿಗೆ ಮುನ್ನುಡಿ ಬರೆದುಕೊಟ್ಟಿರುವ ಹಿರಿಯ ಸಾಹಿತಿ ಡಾ.ಹಂಪನಾ ಹಾಗೂ ಡಾ.ಪದ್ಮಪ್ರಸಾದ ಅವರಿಗೆ ಕೃತಜ್ಞತೆಗಳು. ಈ ನಾಟಕಗಳನ್ನು ಪ್ರಯೋಗಿಸುವ ರಂಗ ತಂಡಗಳು ಲೇಖಕರ ಅನುಮತಿ ಪಡೆಯಬೇಕೆಂದು ಕೋರಲಾಗಿದೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books