ಲೇಖಕ ಭೀಮರಾಯ ಹೇಮನೂರು ಅವರು ಬರೆದ ಸಾಮಾಜಿಕ ನಾಟಕ-ಯಾರು ಒಳ್ಳೆಯವರು ಯಾರು ಕೆಟ್ಟವರು?. ರಂಗಾಸಕ್ತರು ಹಲವಾರು ಕಡೆ ಈ ನಾಟಕ ಪ್ರದರ್ಶಿಸಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಮಹಿಪಾಲ ರೆಡ್ಡಿ ಮುನ್ನೂರು ‘ನಾಟಕದ ಭಾಷೆ, ಪದ ಬಳಕೆಯ ಶೈಲಿ, ತಂತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟ, ಧನಿಕನ ದೌರ್ಜನ್ಯ, ಹೆಣ್ಣಿನ ಶೋಷಣೆ, ಶೋಷಿತರ ಆಕ್ರೋಶ, ಮಾನವೀಯತೆ, ಜೂಜಿನಿಂದ ಹಾಳಾದವರ ಬದುಕು ಇತ್ಯಾದಿ ಮಗ್ಗಲುಗಳನ್ನು ನಾಟಕ ಪರಿಚಯಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಭೀಮರಾಯ ಹೇಮನೂರು. ‘ಭೀಜಿ’ ಎಂಬುದು ಇವರ ಕಾವ್ಯನಾಮ. ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು. ಬಿ.ಕಾಂ ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಅಫಜಲಪುರದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಮುಳ್ಳು ಚೆಲ್ಲಿದ ಹಾದಿಗೆ.. (ಕವನ ಸಂಕಲನ) ಈ ಕೃತಿಗೆ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ 2019ನೇ ಕಾವ್ಯ ವಿಭಾಗದಲ್ಲಿ ಪ್ರಶಸ್ತಿ, .2020ರ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯಲ್ಲಿ ಆಕಾಶವಾಣಿ ಆಯೋಜಿತ ರಾಷ್ಟ್ರಮಟ್ಟದ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕವನ ವಾಚಿಸಿದ್ದರು. ‘ಯಾರು ಒಳ್ಳೆಯವರು ಯಾರು ಕೆಟ್ಟವರು’ (ನಾಟಕ) ...
READ MORE