ಲೇಖಕ ನಿಷ್ಠಿ ರುದ್ರಪ್ಪ ಅವರ ರಂಗರೂಪಕಗಳ ಕೃತಿ-ಬುದ್ಧ ಶರೀಫ. ಭಗವಾನ್ ಬುದ್ಧ ಮತ್ತು ಭಾವೈಕ್ಯತೆಯ ತವನಿಧಿ ಸಂತ ಶಿಶುನಾಳ ಶರೀಫರ ಸಾಹೇಬರ ಜೀವನ ಚಿತ್ರಣವನ್ನು ತೊಗಲು ಗೊಂಬೆಗೆ ಅಳವಡಿಸಿ ರಚಿಸಿದ ಎರಡು ಪ್ರತ್ಯೇಕ ರಂಗರೂಪಕಗಳಿವು. ಭಗವನ್ ಬುದ್ಧ ಮತ್ತು ಶಿಶುನಾಳ ಶರೀಫ ಸಾಹೇಬರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಪರಿಚಯಿಸುವುದರ ಜೊತೆಗೆ ಅವರ ಸಮಾನತೆಯ ಹಾಗೂ ಸರ್ವಜ್ಞತೆಯ ಬದುಕನ್ನು ಕಟ್ಟಿಕೊಡುವುದು ರಂಗ ರೂಪಕಗಳ ಉದ್ದೇಶ. ಅವರ ತತ್ವ ಬೋಧನೆಗೆ ಈ ಕೃತಿಯಲ್ಲಿ ಮಹತ್ವ ಕೊಡಲಾಗಿದೆ. ಈ ಇಬ್ಬರು ಮಹಾಪುರುಷರನ್ನು ವೈಭವೀಕರಿಸದೇ ಇರುವ ವಾಸ್ತವ ಸಂಗತಿಗಳನ್ನು ಕಟ್ಟಿಕೊಡಲಾಗಿದೆ. ಜನ ಸಾಮಾನ್ಯರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಒಂದು ಗಂಟೆಯ ಈ ರೂಪಕಗಳನ್ನು ಪ್ರದರ್ಶಿಸಬಹುದಾಗಿದೆ.
ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...
READ MORE