ಸುಧಾಕರ ಕರ್ಣಾಟಕ ಗ್ರಂಥಾವಳಿಯಡಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ ನಾಟಕ -ರುಕ್ಮಿಣೀ ಸ್ವಯಂವರ. ಮಹಾಕವಿ ರುದ್ರಭಟ್ಟನು ಬರೆದ ಜಗನ್ನಾಥ ವಿಜಯ ಕೃತಿಯನ್ನು ಆಧರಿಸಿ ಅಲ್ಲಿಯ ರುಕ್ಮಿಣಿ ಸ್ವಯಂವರ ಪ್ರಸಂಗವನ್ನು ಇಲ್ಲಿ ನಾಟಕಕ್ಕೆ ರೂಪಾಂತರಿಸಲಾಗಿದೆ.
ಶ್ರೀಕೃಷ್ಣನ ಸ್ನೇಹಿತ ಮಕರಂದ, ಶ್ರೀಕೃಷ್ಣ, ಬಲರಾಮ, ನಾರದಾ, ಶಿಶುಪಾಲ, ಜರಾಸಂದ, ವಿದರ್ಭರಾಜನ ಪುತ್ರಿ ರುಕ್ಮಿಣಿ, ರಾಧೆ. ದುರ್ಯೋಧನ, ಕರ್ಣ ಇತ್ಯಾದಿ ಅರಸರು ಸೇರಿದಂತೆ ಪಾತ್ರಗಳಿವೆ. ಮಗದ ರಾಜ್ಯದ ದೊರೆ ಜರಾಸಂದನಲ್ಲಿಗೆ ನಾರದರ ಪ್ರವೇಶ ಆಗುವುದರೊಂದಿಗೆ ನಾಟಕ ಆರಂಭವಾಗುತ್ತದೆ. ಕೊನೆಗೆ ಶ್ರೀಕೃಷ್ಣನೊಂದಿಗೆ ರುಕ್ಮಿಣಿಯ ವಿವಾಹ ನೆರವೇರುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಉಪವನದಲ್ಲಿ ಸಖಿಯರೊಂದಿಗೆ ರುಕ್ಮಿಣಿಯ ಮಾತುಕತೆ, ಶಿಶುಪಾಲನ ಬಿಡಾರ, ಅರಣ್ಯಪ್ರಾಂತ್ಯದಲ್ಲಿಯ ಪರಶುರಾಮರ ಆಶ್ರಮ ಪ್ರಸಂಗ-ಸನ್ನಿವೇಶಗಳು ಇತ್ಯಾದಿ ನಾಟಕದ ಗಂಭೀರತೆಗೆ ಕಾರಣವಾಗಿವೆ.
©2024 Book Brahma Private Limited.