’ಸಿಡ್ಲುಮರಿ ಮತ್ತು ಇತರೆ ನಗೆ ನಾಟಕಗಳು’ ಕೃತಿಯು ದಾಶರಥಿ ದೀಕ್ಷಿತ್ ಅವರ ಮೂರು ನಗೆ ನಾಟಕಗಳ ಸಂಗ್ರಹವಿದು. ಸಮಾಜದ ದೃಷ್ಟಿಯಲ್ಲಿ ಕನಿಷ್ಠ ಪಾತ್ರಗಳಿಗೂ ಘನತೆ ಎತ್ತರಿಸುವ ಸನ್ನಿವೇಶಗಳನ್ನು ಇಲ್ಲಿ ಕಾಣಬಹುದು. ಆ ಬಗೆಯ ಹಲವಾರು ಪಾತ್ರಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯು ಈ ಎಲ್ಲ ನಾಟಕಗಳ ಕೇಂದ್ರ ಬಿಂದು.
ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರು. ತಂದೆ- ಬಾಲಾಜಿ ದೀಕ್ಷಿತ್, ತಾಯಿ- ಗಂಗೂಬಾಯಿ. ದಾಶರಥಿ ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಮೊಳಕಾಲ್ಮೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ಪಡೆಯಬೇಕಾಯಿತು. ಆನಂತರದಲ್ಲಿ ಬೆಂಗಳೂರಿನ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಪೂರ್ಣಗೊಳಿಸಿ, ಕಾಲೇಜನ್ನು ಬಿಟ್ಟು ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು. ಅವರು ತಮ್ಮ ಕತೆಯೊಂದನ್ನು ಪ್ರಜಾಮತ ಪತ್ರಿಕೆಯ ನಾಡಿಗೇರ್ ಕೃಷ್ಣರಾಯರಿಗೆ ನೀಡಿದ್ದರು. ಆ ಕತೆ ಪ್ರಜಾಮತ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಲೇಖಕ ತ.ರಾ. ಸುಬ್ಬರಾಯರು ಒಮ್ಮೆ ಗಂಭೀರ ಸಾಹಿತ್ಯ ರಚಿಸಲು ಜನರಿದ್ದಾರೆ ನೀನು ಲಘು ಬರಹವನು ರೂಢಿಸಿಕೋ ಎಂದು ...
READ MORE