ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ. ಅಮಾನುಷವಾದ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು, ಜೀತ ವಿಮುಕ್ತಿಯ ಕಾನೂನು, ಉಳುವವನೇ ಭೂ ಒಡೆಯ- ಈ ಮುಂತಾದವುಗಳನ್ನು ಕಥೆಯ ಹಂದರದಲ್ಲಿ ನಾಟಕ ಕಟ್ಟಿ ಹೇಳಲಾಗಿದೆ. ಮಲ ಹೊರುವ ದೃಶ್ಯ ಅಂತೂ ಅತ್ಯಂತ ಭೀಭತ್ಸ, ಕರುಣಾ ರಸದಿಂದ ಕೂಡಿದೆ. ಓದುಗನಲ್ಲಿ ಕಂಪನ ಉಂಟುಮಾಡುತ್ತದೆ.
ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು. 1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...
READ MORE