ಲೇಖಕ ಸತ್ಯನಾರಾಯಣರಾವ್ ಅವರ ನಾಟಕ ಕೃತಿ ‘ಪರಿಸಾರಕ’. ಕೃತಿಗೆ ಬೆನ್ನುಡಿ ಬರೆದ ಎಂ. ಬಿ. ನಟರಾಜ್, ‘ನಾಟಕದ ವಸ್ತು, ರಂಗ ನಿರೂಪಣೆ, ದೃಶ್ಯ ಸಂಯೋಜನೆ ಎಲ್ಲವೂ ವರ್ಣ ಸಂಘರ್ಷದಲ್ಲಿ ಸಿಕ್ಕಿ ನರಳುವ ಜ್ಞಾನಾರ್ಜನೆ-ಸಿದ್ದಿಯ ಸ್ವರೂಪವನ್ನು ಸ್ಪಷ್ಟಪಡಿಸುತ್ತವೆ. ಮಳೆ ಅರ್ಥಾತ್ ನೀರಿನ ಜೊತೆಗೆ ಮನುಷ್ಯನ ಸಂಬಂಧ ಧ್ವನಿಪೂರ್ಣವಾಗಿದೆ.ಜಾತಿಯನ್ನು ಮೀರಿದ್ದು ಪ್ರತಿಭೆ, ಅಂತಃಶಕ್ತಿ; ಪ್ರಕೃತಿಯಲ್ಲಿರುವ ನಿಗೂಢ ಶಕ್ತಿಯನ್ನು ಒಲಿಸಿಕೊಳ್ಳುವ ಆತ್ಮಬಲ ಜಾತಿ ಮತವನ್ನು ಮೀರಿದ್ದು, ಪ್ರಕೃತಿಯ ಜೊತೆ ಮನುಷ್ಯನ ಸಾಂಗತ್ಯ, ಸ್ನೇಹ, ಪ್ರೀತಿಗಳು ಅವನ ಬದುಕನ್ನು ಹಸನುಗೊಳಿಸುತ್ತದೆ-ಇಂತಹ ಮುಖ್ಯ ವಿಚಾರಗಳನ್ನು ನಾಟಕ ಸಮರ್ಥವಾಗಿ ಧ್ವನಿಸುತ್ತದೆ.’ ಎಂದು ಪ್ರಶಂಸಿದ್ದಾರೆ.
ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...
READ MORE(ಹೊಸತು, ಏಪ್ರಿಲ್-2012, ಪುಸ್ತಕದ ಪರಿಚಯ)
ಪುರಾಣದ ಕಥೆಯೊಂದನ್ನು ವರ್ತಮಾನಕ್ಕೆ ಒಗ್ಗಿ ಅಂದಿನ ಸಮಸ್ಯೆಗಳಿಲ್ಲ. ಇಂದೂ ಜೀವಂತವಾಗಿರು ವುದನ್ನು ಸ್ಪಷ್ಟಪಡಿಸುವ ನಾಟಕ, ಒಂದು ವ್ಯವಸ್ಥೆಯಲ್ಲಿ ಬದಲಾವಣೆಯನ್ನು ನಿರಾಕರಿಸುವ ಮನಸ್ಸುಗಳಿಗೆ ತಮ್ಮ ಹಿಂದಷ್ಟೇ ಕಾಯುವ ಹವಣಿಕೆ, ಪರಂಪರೆಯ ಶ್ರೇಷ ಎಂಬ ಕವಚವನ್ನು ಯೋಗ್ಯವಲ್ಲದ ವ್ಯವಸ್ಥೆಗಳಿಗೂ ತೋಡಿಸುತ್ತ ಜಾತಿಯ ಗೋಡೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಹುನ್ನಾರ ಎಲ್ಲ ಕಾಲದಲ್ಲೂ ನಡೆದಿದೆ. ಹಿಂದೂಧರು ದಲ್ಲಂತೂ ಇದು ಅತಿರೇಕಕ್ಕೆ ಹೋಗಿ ಅನಾಹುತಗಳೇ ಆಗಿದೆ, ದಾಸಿಪುತ್ರ - ಕಾನೀನ - ಚಂಡಾಳ - ಚಾರ್ವಾಕ- ಮುಂತಾದ ಅಂದಿನ ಪದಗಳು ಇಂದೂ ನಮ್ಮ ಸುಧೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತವೆ. ಈ ವರ್ಗ- ವರ್ಣನಲ್ಲಿ ಬಹಳ ಕ್ರೋದ ಹಾಗೂ ಸಮಾನತೆಯ ವಿರೋಧಿ ಕೃತಿಯನಾದರೂ ಸೂತಪುತನೆಂದೆನಿಸಿದ ಕರ್ಣ ಕ ಹುಟ್ಟನ್ನು ಮರೆಮಾಚಿ ಪರಶುರಾಮರಲ್ಲಿ ತಾನು ಬ್ರಾಹ್ಮಣನೆಂದು ಹೇಳಿ ವಿದ್ಯೆ ಕಲಿಯಬೇಕಾಯಿತು, ಕುಟಿಲ ವ್ಯವಸ್ಥೆಯೊಂದಕ್ಕೆ ಏಕಲವ್ಯ ಬಲಿಯಾಗಿ ಹೆಬ್ಬೆರಳಿನೊಂದಿಗೆ ಅಜೇಯ ಬಿಚ್ಚರವಾಗುವ ಅವಕಾಶ ಕಳೆದುಕೊಂಡ. ಹೀಗೆ ಸಮಾನತೆ - ಹೋರಾಟ ಬಯಸಿದ ಪಾತ್ರಗಳು ಅಂದೂ ಸೋತಿವೆ. ಇದೂ ಸೋಲುತ್ತಿದೆ. ಈ ರಾಜಕದಲ್ಲಿ ಪುರಾಣದ ಪಾತ್ರಗಳಾದ ಕವನ-ಐಲೂಷರೆಂಬ ಎರಡು ಪಾತ್ರಗಳಿವೆ. ವಿದ್ಯೆಕಲಿತು ಸಾಧನೆ ಮಾಡಿದರೂ ಬೆಲೆಯಲ್ಲ ದವರಾಗಿ ಅವಗಣನೆಗೆ ಗುರಿಯಾಗಿ ನಾನಾರೀತಿಯ ಕಷ್ಟಗಳಿಗೆ ಒಳಗಾಗುತ್ತಾರೆ. ವಿದ್ಯೆ ಕಲಿಯುವ ಸಾಮರ್ಥ್ಯ ವಿದ್ದೂ ಶೂದ್ರ-ಡಾಸಿದ್ಧರ ಎಂಬಂಥ ಹುಟ್ಟಿಗೆ ಕಾರಣಗಳನ್ನು ಮುಂದೊಡ್ಡಿ ಪ್ರತಿಭೆಯನ್ನು ವಂಚಿಸುವ ಪುರೋಹಿತರಾ ಮತ್ತು ರಾಜ್ಯಾಡಳಿತವನ್ನು ಪ್ರತಿಭಟಿಸುವ ಉದ್ದೇಶದಿಂದ ನಾಟಕ ರಚನೆ ಆಗಿದೆ.