ಸ್ತ್ರೀ-ಪುರುಷ ಸಮಾನತೆಗೆ ಪ್ರಾಮುಖ್ಯತೆ ನೀಡಿ `ಚಾಮಚೆಲುವೆ’ ಎಂಬ ಸ್ತ್ರೀವಾದಿ ನಾಟಕವನ್ನು ರಚಿಸಿದ್ದಾರೆ ಸುಜಾತ ಅಕ್ಕಿ. “70ರ ದಶಕ ಎಲ್ಲ ಭಾರತೀಯ ಭಾಷೆಗಳಲ್ಲೂ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟದ ಕಾಲವಾಗಿತ್ತು. ಆಗ ಹಲವರು ಜನಪದ ಕಥೆ-ಕಾವ್ಯ ವಸ್ತುಗಳನ್ನು ವರ್ತಮಾನಕ್ಕೆ ರೂಪಕ ಪ್ರತಿಮೆಗಳಾಗುವಂತೆ ಅನ್ವಯಿಸಿ ನಾಟಕ ರಚಿಸಿದ್ದಾರೆ. 90 ರ ದಶಕದಲ್ಲಿ ಇದು ಹಠಾತ್ ಸ್ಥಗಿತಗೊಂಡಂತಿದ್ದುದನ್ನು ಪುನಃ ಡಾ. ಸುಜಾತ ಅಕ್ಕಿ ಅವರು ಹಳೆಪುರಾಣವನ್ನು ಹೊಸ ಪುರಾಣವನ್ನಾಗಿ ವರ್ತಮಾನಕ್ಕೆ ಸಲ್ಲುವಂತೆ ಮುರಿದು ಕಟ್ಟುವ ಕೆಲಸ ಮಾಡಿದ್ದಾರೆ. 'ಚಾಮಚಲುವೆ'ನಾಟಕ ಜನಪದ ನೆಲೆಗಟ್ಟಿನಲ್ಲಿ ರಂಗರೂಪಕವಾಗಿ ಹರಳುಗಟ್ಟುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದಂತಾಗಿದೆ. ಪೌರಾಣಿಕ ಪಾತ್ರಗಳ ತರ್ಕಾತೀತ ಆವರಣ, ದೈವತ್ವದಲ್ಲಿಯೇ ನೆಲೆಕಾಣದೆ ಮಾನವೀಯ ಪಾತಳಿಯಲ್ಲಿ ಮಾನವ ಸಂಬಂಧಗಳನ್ನು, ಸಂಸಾರದ ವ್ಯವಹಾರ, ಮದುವೆ ಎಂಬ ಸಾಂಸ್ಕೃತಿಕ ವ್ಯವಸ್ಥೆಯ ಆಚೆಗಿನ ಗಂಡು-ಹೆಣ್ಣು ಸಂಬಂಧಗಳನ್ನು 'ಶೃಂಗಾರ ರಸ' ಒದಗಿಸಿರುವ ರಂಜನೀಯ ನಾಟಕೀಯ ತಿರುವುಗಳಿಂದ ಆಪ್ತವಾಗುವಂತೆ ಈ ನಾಟಕ ರೂಪುಗೊಂಡಿದೆ” ಎಂದು ಕೃತಿ ಕುರಿತು ನಾಟಕಕಾರ ಸಿ. ಬಸವಲಿಂಗಯ್ಯ ಶ್ಲಾಘಿಸಿದ್ದಾರೆ
©2024 Book Brahma Private Limited.