ರಾಜೇಂದ್ರ ಕಾರಂತ ಬರೆದ ನಾಟಕ-ತಂತಿ. ಲೇಖಕರ ಕುರಿತು ಸಾಹಿತಿ, ನಿರ್ದೆಶಕ ಟಿ.ಎನ್. ಸೀತಾರಾಮ 'ರಾಜೇಂದ್ರ ಕಾರಂತರು ನಾನು ಹೊಟ್ಟೆಕಿಚ್ಚು ಪಡುವಂತ ನಾಟಕಕಾರ' ಎನ್ನುತ್ತಾರೆ.
ಕೃತಿಯ ಬೆನ್ನುಡಿಯಲ್ಲಿ ಅವರು ’ನನಗೆ ಮೊದಲು ರಾಜೇಂದ್ರರ ಪರಿಚಯ ಅಷ್ಟೊಂದಿರಲಿಲ್ಲ, 15 ವರ್ಷಗಳ ಹಿಂದೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕೋತ್ಸವವೊಂದರಲ್ಲಿ ಅವರ ’ತಂದ” ಅನ್ನೋ ನಾಟಕ ನೋಡಿದ್ದೆ. ಅತ್ಯಂತ ಸೂಕ್ಷ್ಮ ಮನಸ್ಸಿನ ಹೆಣ್ಣೊಬ್ಬಳು ಎದುರಿಸುವ ಒಂದು ಸಂದಿಗ್ಧ ಸ್ಥಿತಿಯನ್ನು ಅಷ್ಟೇ ಸೂಕ್ಷ್ಮವಾದ ಭಾಷೆಯಲ್ಲಿ ಹಿಡಿದಿಟ್ಟಿದ್ದರು. ನನಗೆ ಇವತ್ತಿಗೂ ಅನಾಥ ನಾಟಕಗಳು ಮನಸ್ಸಲ್ಲಿ ತುಂಬಾ ದಿನ ಉಳಿಯುವುದಿಲ್ಲ, ಆದರೆ, ತುಂಬಾ ಗಾಢವಾದ ಪರಿಣಾಮ ಬೀರುವ ನಾಟಕಗಳು ಮಾತ್ರ ಉಳಿಯುತ್ತವೆ. ರಾಜೇಂದ್ರ ಕಾರಂತರು ಬದುಕಿಗೆ ಹತ್ತಿರವಾದ ಕಥೆಯನ್ನು ನಾಟಕವಾಗಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.