ಪರ್ವತವಾಣಿ ಅವರು ಬರೆದ ನಾಟಕ-ಬಹಾದ್ದೂರ್ ಗಂಡ. ಬೆಳೆದು ನಿಂತ ಇಬ್ಬರು ಹೆಣ್ಣುಮಕ್ಕಳ ಮದುವೆ ಯಾವಾಗ ಆಗುತ್ತೋ ಎಂದು ಕಾಯುತ್ತಿದ್ದ ತಾಯಿ, ಹಣೆಬರೆಹದಲ್ಲಿದ್ದರೆ ಆಗುತ್ತೆ ಎನ್ನುವ ತಂದೆ, ಈ ಮಧ್ಯೆ ಪುರೋಹಿತ, ಮದುವೆಗಾಗಿ ಕಾಯುತ್ತಿದ್ದ ಇಬ್ಬರು ಗಂಡು ಪಾತ್ರಧಾರಿಗಳು -ಈ ಎಲ್ಲವುಗಳ ಸನ್ನಿವೇಶದಲ್ಲಿ ಸಾಮಾಜಿಕ ಸಮಸ್ಯೆ, ವ್ಯಕ್ತಿಗತ ಲಾಭ-ನಷ್ಟದ ವಿಚಾರ ಸೇರಿದಂತೆ ನಾಟಕದ ಕಥಾ ವಸ್ತಿ ಇದ್ದು, ಹಾಸ್ಯವೇ ಇದರ ಪ್ರಧಾನ ಗುಣವಾಗಿದೆ.
’ಪರ್ವತವಾಣಿ’ ಎಂದು ಜನಪ್ರಿಯರಾಗಿದ್ದ ಕನ್ನಡದ ನಾಟಕಕಾರ, ನಟ, ನಿರ್ದೇಶಕ ಪರ್ವತ ವಾಡಿ ನರಸಿಂಗರಾವ್. 1911ರ ಸೆಪ್ಟಂಬರ್ 2 ತಮಿಳುನಾಡಿನ ಹತ್ತಿರದ ಹಳ್ಳಿ ಪರ್ವತವಾಡಿಯಲ್ಲಿ ಜನಿಸಿದರು. ಇವರ ಕಂಚಿನ ಕಂಠವನ್ನು ಕೇಳಿದ ವಿ. ಕೃ. ಗೋಕಾಕ್ ನೀಡಿದ ಸೂಚನೆಯ ಮೇರೆಗೆ ಪರ್ವತವಾಡಿಯವರು ’ಪರ್ವತವಾಣಿ’ ಆದರು. ಪರ್ವತವಾಣಿಯವರು ತಾರಾಮಂಡಲವೆಂಬ ಹವ್ಯಾಸಿ ನಾಟಕತಂಡವನ್ನು, ಆನಂತರ ನಂಕಪ್ನಿ ಎಂಬ ನಾಟಕತಂಡವನ್ನು ಕಟ್ಟಿ ಸಾವಿರಾರು ನಾಟಕಪ್ರಯೋಗಗಳನ್ನು ಮಾಡಿದರು. ಸ್ವತಃ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರು ಸುಮಾರು 83 ನಾಟಕಗಳನ್ನು ರಚಿಸಿದ್ದು ಮೊದಲ ನಾಟಕ ’ಮಾಲತಿ’. ಹಣಹದ್ದು, ...
READ MORE